ರಾಜ್ಯದಲ್ಲಿ ಕೇವಲ ಶೇ.1 ರಷ್ಟು ಮಾದಕ ವ್ಯಸನಿಗಳಿದ್ದಾರೆ: ಸುರ್ಜಿತ್ ಕುಮಾರ್

ಪಂಜಾಬ್ ರಾಜ್ಯದಲ್ಲಿ ಕೇವಲ ಶೇ.1 ರಷ್ಟು ಮಾತ್ರ ಮಾದಕ ವ್ಯಸನಿಗಳಿದ್ದು, ಮಾದಕ ವ್ಯಸನವೆಂಬುದೇನು ಗಂಭೀರವಾದ ಸಮಸ್ಯೆಯಲ್ಲ ಎಂದು ಪಂಜಾಬ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ...
ಪಂಜಾಬ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಸುರ್ಜಿತ್ ಕುಮಾರ್
ಪಂಜಾಬ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಸುರ್ಜಿತ್ ಕುಮಾರ್

ಪಂಜಾಬ್: ಪಂಜಾಬ್ ರಾಜ್ಯದಲ್ಲಿ ಕೇವಲ ಶೇ.1 ರಷ್ಟು ಮಾತ್ರ ಮಾದಕ ವ್ಯಸನಿಗಳಿದ್ದು, ಮಾದಕ ವ್ಯಸನವೆಂಬುದೇನು ಗಂಭೀರವಾದ ಸಮಸ್ಯೆಯಲ್ಲ ಎಂದು ಪಂಜಾಬ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಸುರ್ಜಿತ್ ಕುಮಾರ್ ಅವರು ಹೇಳಿದ್ದಾರೆ.

ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧ ದಿನ ಅಂಗವಾಗಿ ನಿನ್ನೆ ಅಮೃತ್ಸರದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಈ ಹಿಂದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯದಲ್ಲಿ ಶೇ.70 ರಷ್ಟು ಯುವಕರು ಮಾದಕ ವ್ಯಸನಿಗಳಾಗಿದ್ದಾರೆಂದು ಹೇಳಿದ್ದರು. ಇದೀಗ ಈ ಹೇಳಿಕೆ ಏಮ್ಸ್ ಸಮೀಕ್ಷೆಯಿಂದ ಸುಳ್ಳಾಗುವಂತೆ ಮಾಡಿದೆ. ರಾಜ್ಯಕ್ಕೆ ಕೆಟ್ಟ ಹೆಸರು ತರಲು ಯೋಜಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಾದಕ ವ್ಯಸನವೆಂಬುದು ಗಂಭೀರವಾದ ಸಮಸ್ಯೆಯೇನಲ್ಲ ಎಂದು ಹೇಳಿದ್ದಾರೆ.

ಏಮ್ಸ್ 10 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ್ದು, ಸಮೀಕ್ಷೆ ವೇಳೆ ಶೇ. 1.8 ರಷ್ಟು ಮಂದಿ ಮಾದಕ ವ್ಯಸನಿಗಳಿದ್ದಾರೆಂಬುದು ತಿಳಿದುಬಂದಿದೆ. ಇದೇ ಸಮೀಕ್ಷೆಯನ್ನು ಎಲ್ಲಾ 22 ಜಿಲ್ಲೆಗಳಲ್ಲೂ ನಡೆಸಿದರೆ, ಇದರ ಶೇಕಡಾವಾರು 1 ಕ್ಕೆ ಇಳಿಯುತ್ತದೆ. ರಾಜ್ಯದಲ್ಲಿ ಕೇವಲ ಶೇ.1 ರಷ್ಟು ಮಾದಕ ವ್ಯಸನಿಗಳಿರುವುದು ಕಂಡು ಬರುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com