ಚೆನ್ನೈ: ಇದೊಂದು ಹೃದಯ ವಿದ್ರಾವಕ ಘಟನೆ. ರಕ್ತ ಮಡುವಿನಲ್ಲಿದ್ದ ತನ್ನ ಮಗಳನ್ನು ರಕ್ಷಿಸಲು ಯಾರೂ ಯತ್ನಿಸಲಿಲ್ಲ ಎಂದು ಹಾಡುಹಗಲೇ ಚೆನ್ನೈ ರೇಲ್ವೆ ಪ್ಲಾಟ್ ಪಾರ್ಮ್ ನಲ್ಲಿ ಕೊಲೆಯಾದ 24 ವರ್ಷದ ಇನ್ಫೋಸಿಸ್ ಉದ್ಯೋಗಿ ಸ್ವಾತಿಯ ತಂದೆ ಹೇಳಿದ್ದಾರೆ.
'ಮುಖ ಪ್ರೇಕ್ಷಕರಾದ ಸಾರ್ವಜನಿಕರು ನನ್ನ ಮಗಳನ್ನು ಮತ್ತೆ ನೋಡದಂತೆ ಮಾಡಿದರು' ಎಂದು ಸ್ವಾತಿ ತಂದೆ ಸಂತನ್ ಗೋಪಾಲ್ ಕೃಷ್ಣ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಳೆದ ಶುಕ್ರವಾರ ದುಷ್ಕರ್ಮಿಯೊಬ್ಬ ಸಾರ್ವಜನಿಕರೆದುರೇ ಸ್ವಾತಿಯನ್ನು ಕೊಚ್ಚಿ ಕೊಲೆ ಮಾಡಿದ್ದ. ಈ ವೇಳೆ ಸಾರ್ವಜನಿಕರಾರು ಸ್ವಾತಿಯ ರಕ್ಷಣೆಗೆ ಬರಲಿಲ್ಲ ಎಂದು ಸಂತನ್ ಗೋಪಾಲ್ ಕೃಷ್ಣ ಅವರು ಆರೋಪಿಸಿದ್ದಾರೆ.
ನನ್ನ ಮಗಳು ಸ್ವಾತಿ ತುಂಬಾ ಮೃದು ಸ್ವಭಾವದವಳಾಗಿದ್ದಳು ಮತ್ತು ಆಕೆ ತನ್ನ ಅಂಗಾಂಗಳನ್ನು ದಾನ ಮಾಡಲು ಬಯಸಿದ್ದಳು ಎಂದು ಸಂತನ್ ಗೋಪಾಲ್ ಕೃಷ್ಣ ತಿಳಿಸಿದ್ದಾರೆ.