ಯುದ್ಧ ಮಾಡಿ ಕಾಶ್ಮೀರ ಗೆಲ್ಲಲು ಸಾಧ್ಯವಿಲ್ಲ: ಹೀನಾ ರಬ್ಬಾನಿ ಖರ್

ಪಾಕಿಸ್ತಾನ ಕಾಶ್ಮೀರ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಬೇಕೇ ಹೊರತು ಭಾರತದೊಂದಿಗೆ ಯುದ್ಧ ಮಾಡಿ ಕಾಶ್ಮೀರ ಗೆಲ್ಲಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ಸಚಿವೆ ಹೀನಾ ರಬ್ಬಾನಿ ಖರ್ ಹೇಳಿದ್ದಾರೆ.
ಪಾಕಿಸ್ತಾನ ಮಾಜಿ ಸಚಿವೆ ಹೀನಾ ರಬ್ಬಾನಿ ಖರ್ (ಸಂಗ್ರಹ ಚಿತ್ರ)
ಪಾಕಿಸ್ತಾನ ಮಾಜಿ ಸಚಿವೆ ಹೀನಾ ರಬ್ಬಾನಿ ಖರ್ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಪಾಕಿಸ್ತಾನ ಕಾಶ್ಮೀರ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಬೇಕೇ ಹೊರತು ಭಾರತದೊಂದಿಗೆ ಯುದ್ಧ ಮಾಡಿ ಕಾಶ್ಮೀರ ಗೆಲ್ಲಲು ಸಾಧ್ಯವಿಲ್ಲ ಎಂದು  ಪಾಕಿಸ್ತಾನದ ಮಾಜಿ ಸಚಿವೆ ಹೀನಾ ರಬ್ಬಾನಿ ಖರ್ ಹೇಳಿದ್ದಾರೆ.

ಪಾಕಿಸ್ತಾನದ ಜಿಯೋ ಸುದ್ದಿಸಂಸ್ಥೆಗೆ ಮಾತನಾಡಿರುವ ಹೀನಾ ರಬ್ಬಾನಿ ಖರ್, ನನ್ನ ಅಭಿಪ್ರಾಯದ ಪ್ರಕಾರ ಪಾಕಿಸ್ತಾನ ದೇಶದ ಭಾರತದೊಂದಿಗೆ ಸೌಹಾರ್ಧಯುತವಾಗಿ ಚರ್ಚಿಸಿ ಪರಸ್ಪರ  ವಿಶ್ವಾಸದೊಂದಿಗೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ಹೊರತು ಯುದ್ಧ ಮಾಡಿ ಕಾಶ್ಮೀರವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಾರತದ ಬಳಿ ಇರುವ ಪರಮಾಣು  ಶಕ್ತಿಯಿಂದಲೋ ಅಥವಾ ಅದರ ಪ್ರಬಲ ಸೈನಿಕ ಶಕ್ತಿಯಿಂದಲೋ ಆಮೆರಿಕ ದೇಶ ಭಾರತದೊಂದಿಗೆ ಸ್ನೇಹಸಂಬಂಧ ಮಾಡಿಲ್ಲ. ಬದಲಿಗೆ ಭಾರತದಲ್ಲಿರುವ ಪ್ರಬಲ ಪ್ರಜಾಪ್ರಭುತ್ವ  ಶಕ್ತಿಯಿಂದಾಗಿ ಆಮೆರಿಕ ಭಾರತದೊಂದಿಗೆ ಸ್ನೇಹ ಮಾಡಿದೆ ಎಂದು ಹೀನಾ ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ ಪಾಕಿಸ್ತಾನದ ಪರಮಾಣು ಶಕ್ತಿ ಕುರಿತಂತೆ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಪರೋಕ್ಷವಾಗಿ ಟೀಕಿಸಿರುವ ಹೀನಾ ರಬ್ಬಾನಿ ಖರ್, ಕಾಶ್ಮೀರ ಸಮಸ್ಯೆಯನ್ನು ಪ್ರತಿಕೂಲ  ವಾತಾವರಣದಿ೦ದ ಅ೦ತ್ಯಗೊಳಿಸಲು ಸಾಧ್ಯವಿಲ್ಲ. ದೇಶಗಳ ನಡುವಿನ ನ೦ಬಿಕೆ ವೃದ್ಧಿ ಮತ್ತು ಮಾತುಕತೆಯಿ೦ದ ಕಾಶ್ಮೀರವನ್ನು ಪಡೆದುಕೊಳ್ಳಲು ಸಾಧ್ಯವಿದೆ ಎ೦ದು ಪಾಕಿಸ್ತಾನಕ್ಕೆ ಸಲಹೆ  ನೀಡಿದ್ದಾರೆ.

ಪಾಕ್ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ನೀಡಿದ ಮಾಜಿ ಸಚಿವೆ
ಇದೇ ವೇಳೆ ನವಾಜ್ ಷರೀಫ್ ನೇತೃತ್ವದ ಪಿಪಿಪಿ ಪಕ್ಷ ಸರ್ಕಾರ ಮೈತ್ರೀ ಹೊರತಾಗಿಯೂ ಭಾರತದೊಂದಿಗಿನ ಸ್ನೇಹವನ್ನು ಬಲಿಷ್ಠಗೊಳಿಸಲು ಯತ್ನಿಸುತ್ತಿದೆ. ವೀಸಾ ನೀತಿ ಸರಳೀಕರಣ,  ಭಾರತದೊಂದಿಗಿನ ವಾಣಿಜ್ಯ ಒಪ್ಪಂದಗಳ ಉತ್ತಮ ನಿರ್ವಹಣೆಯಿಂದಾಗಿ ಸರ್ಕಾರ ಭಾರತದೊಂದಿಗೆ ಸ್ನೇಹ ಸಂಬಂಧವನ್ನು ಉತ್ತಮವಾಗಿ ಮುಂದುವರೆಸುತ್ತಿದೆ. ಇದಾಗ್ಯೂ  ಭಾರತದೊಂದಿಗಿನ ಸ್ನೇಹ ಮತ್ತಷ್ಟು ಗಟ್ಟಿಗೊಳಿಸಲು ನವಾಜ್ ಷರೀಫ್ ಅವರ ಸರ್ಕಾರ ಮತ್ತಷ್ಟು ಪರಿಣಾಮಕಾರಿ ಪ್ರಯತ್ನಗಳನ್ನು ಮಾಡಬಹುದು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com