

ನವದೆಹಲಿ: ಪ್ರಚಾರ ನನಗಾಗಿ ಕಾಯುತ್ತಿದೆ, ಅದು ನನ್ನನ್ನು ಬಯಸುತ್ತಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಮೇಲೆ ನಿರಂತರವಾಗಿ ದಾಳಿ ನಡೆಸಿ ವಿತ್ತಸಚಿವ ಅರುಣ್ ಜೇಟ್ಲಿ ಅವರನ್ನು ಮುಜುಗರಕ್ಕೆ ಈಡುಮಾಡಿದ್ದ ಸ್ವಾಮಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, "ಸುಬ್ರಮಣಿಯನ್ ಸ್ವಾಮಿ ಅವರ ಪ್ರಚಾರದ ಹುಚ್ಚನ್ನು" ಬಿಜೆಪಿ ಅನುಮೋದಿಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರುವ ಸ್ವಾಮಿ ಪ್ರಚಾರವು ನಿರಂತರವಾಗಿ ನನ್ನನ್ನು ಕೋರುತ್ತಿದೆ’ ಎಂದಿದ್ದಾರೆ.
ಮೋದಿ ಅವರ ಧೈರ್ಯವನ್ನು ನಾನು ಮೆಚ್ಚಿಕೊಂಡಿದ್ದೇನೆ, ಎಂದೆಂದಿಗೂ ಅವರ ಬೆಂಬಲಕ್ಕೆ ನೀನು ನಿಂತಿರುತ್ತೇನೆ, ಆದರೆ ಪತ್ರಕರ್ತರು ಉದ್ದೇಶಪೂರ್ವಕವಾಗಿ ನನ್ನನ್ನು ಪ್ರಚೋದಿಸಲು ಕಟ್ಟುಕಥೆಗಳನ್ನು ಹುಟ್ಟುಹಾಕುತ್ತಾರೆ’ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಚಾರವು ನಿರಂತರವಾಗಿ ರಾಜಕಾರಣಿಯ ಬೆನ್ನುಹತ್ತಿದಾಗ ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತದೆ. 30 ಓ.ವಿ ಗಳು ಮನೆಯ ಹೊರಗಿವೆ, 200 ಮಿಸ್ಡ್ ಕಾಲ್ಗಳು ಚಾನೆಲ್ಗಳಿಂದ ಮತ್ತು ಬಂದಿದೆ. ಪ್ರೆಸ್ಟಿಟ್ಯೂಟ್ಗಳು ನನ್ನನ್ನು ಉತ್ತರಿಸುವಂತೆ ಪ್ರತಿದಿನವೂ ಉದ್ದೇಶಪೂರ್ವಕ ಕಟ್ಟುಕಥೆಗಳನ್ನು ಹುಟ್ಟುಹಾಕುತ್ತಿವೆ’ ಎಂದು ಸ್ವಾಮಿ ಇನ್ನೊಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ನಾನು ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಏನು ಬೇಕಾದರೂ ಆಗಲಿ ನಾನು ಮೋದಿ ಅವರ ಜೊತೆಗೆ ಇರುತ್ತೇನೆ. ನಾನು ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದೇನೆ. ಯಾವುದೇ ವಿದೇಶೀ ಶಕ್ತಿ ಅವರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.