
ನವದೆಹಲಿ: ಕಳೆದ ಗಣರಾಜ್ಯೋತ್ಸವದಂದು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದ್ದ ಸ್ವದೇಶಿ ನಿರ್ಮಿತ ಟೋರ್ಪಿಡೊ ವರುಣಾಸ್ತ್ರವನ್ನು ಭಾರತೀಯ ನೌಕಾಪಡೆಗೆ ಇಂದು ಸೇರ್ಪಡೆ ಮಾಡಲಾಗಿದೆ.
ಡಿಆರ್ಡಿಒ ದ ನೆವಲ್ ಸೈನ್ಸ್ ಆ್ಯಮಡ್ ಟೆಕ್ನಾಲಜಿಕಲ್ ಲ್ಯಾಬೋರೇಟರಿಯಲ್ಲಿ ಟೋರ್ಪಿಡೊ ವರುಣಾಸ್ತ್ರವನ್ನು ವಿನ್ಯಾಸಗೊಳಿಸಲಾಗಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭಾರತೀಯ ನೌಕಾದಳಕ್ಕೆ ಹಸ್ತಾಂತರಿಸಿದರು.
ಟೋರ್ಪಿಡೊ ವರುಣಾಸ್ತ್ರ ಒಟ್ಟು 1.25 ಟನ್ ತೂಕವಿದ್ದು, 250 ಕೆಜಿ ತೂಕದ ಸ್ಫೋಟಕಗಳನ್ನು ಗಂಟೆಗೆ 40 ನಾಟಿಕಲ್ ಮೈಲ್ ವೇಗದಲ್ಲಿ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.
Advertisement