ದಾವೂದ್ ನಿಂದ ಜೀವ ಬೆದರಿಕೆ: ಸ್ವಾಮಿ ಚಕ್ರಪಾಣಿಗೆ 'ಝಡ್‌' ಶ್ರೇಣಿ ಭದ್ರತೆ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಾರಿಗೆ ಬೆಂಕಿ ಹಚ್ಚಿ ಜೀವ ಬೆದರಿಕೆ ಪಡೆದಿದ್ದ ಹಿಂದೂ ಮಹಾಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಅವರುಗೆ 'ಝಡ್‌' ಶ್ರೇಣಿ ಭದ್ರತೆ...
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಹಿಂದೂ ಮಹಾಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಹಿಂದೂ ಮಹಾಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಾರಿಗೆ ಬೆಂಕಿ ಹಚ್ಚಿ ಜೀವ ಬೆದರಿಕೆ ಪಡೆದಿದ್ದ ಹಿಂದೂ ಮಹಾಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಅವರುಗೆ 'ಝಡ್‌' ಶ್ರೇಣಿ ಭದ್ರತೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಮುಂಬೈನಲ್ಲಿ ದಾವೂದ್ ಕಾರನ್ನು ಅಖಿಲ ಭಾರತ ಹಿಂದೂ ಮಹಾಸಭಾದ ಮುಖ್ಯಸ್ಥರಾದ ಸ್ವಾಮಿ ಚಕ್ರಪಾಣಿ ಅವರು ಹರಾಜಿನಲ್ಲಿ ಖರೀದಿ ಮಾಡಿದ್ದರು. ಅಲ್ಲದೆ, ದಾವೂದ್ ಹುಟ್ಟುಹಬ್ಬದ ದಿನದಂದು ಕಾರಿಗೆ ಬೆಂಕಿ ಹಚ್ಚಿದ್ದರು.

ಘಟನೆ ನಂತರ ಜೀವ ಬೆದರಿಕೆ ಬರುತ್ತಿರುವುದಾಗಿ ಹೇಳಿಕೊಂಡಿದ್ದ ಸ್ವಾಮಿ ಅವರು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದಿದ್ದರು. ಇದರಂತೆ ತನಿಖೆ ಕೈಗೊಂಡಿದ್ದ ಪೊಲೀಸರು ನಾಲ್ವರನ್ನು ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಬಂಧಿತರು ಸ್ವಾಮಿ ಚಕ್ರಪಾಣಿಯವರ ಮೇಲೆ ದಾಳಿ ಮಾಡಲು ಸಂಚು ರೂಪಿಸಿರುವುದು ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಸ್ವಾಮಿ ಚಕ್ರಪಾಣಿಗೆ ಸರ್ಕಾರ ಇದೀಗ 'ಝಡ್‌' ಶ್ರೇಣಿ ಭದ್ರತೆ ನೀಡಿರುವುದಾಗಿ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com