ಸಾಂದರ್ಭಿಕ ಚಿತ್ರ
ದೇಶ
ಪೆಟ್ರೋಲ್ 89 ಪೈಸೆ, ಡೀಸೆಲ್ 49 ಪೈಸೆ ಇಳಿಕೆ
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತೈಲ ಬೆಲೆಯನ್ನು ಗುರುವಾರ ಪರಿಷ್ಕರಿಸಿದ್ದು, ಪೆಟ್ರೋಲ್ ಲೀಟರ್‌ಗೆ 89 ಪೈಸೆ ಮತ್ತು ಡೀಸೆಲ್ 49 ಪೈಸೆ ಇಳಿಕೆ ಮಾಡಿವೆ.
ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತೈಲ ಬೆಲೆಯನ್ನು ಗುರುವಾರ ಪರಿಷ್ಕರಿಸಿದ್ದು, ಪೆಟ್ರೋಲ್ ಲೀಟರ್‌ಗೆ 89 ಪೈಸೆ ಮತ್ತು ಡೀಸೆಲ್ 49 ಪೈಸೆ ಇಳಿಕೆ ಮಾಡಿವೆ.
ಪರಿಷ್ಕೃತ ದರ ಗುರುವಾರ ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದೆ. ಕಳೆದ ಜೂ.15ರಂದು ಪೆಟ್ರೋಲ್ ಲೀಟರ್‌ಗೆ 5 ಪೈಸೆ ಮತ್ತು ಡೀಸೆಲ್ ದರವನ್ನು 1.26 ರೂ. ಏರಿಕೆ ಮಾಡಲಾಗಿತ್ತು.
ಕಳೆದ ಎರಡು ತಿಂಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿರಲಿಲ್ಲ. 2 ತಿಂಗಳ ನಂತರ ಮೊದಲ ಬಾರಿಗೆ ಇಳಿಕೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ