ವಾಯು ಸೇನೆಗೆ ತೇಜಸ್ ಸೇರ್ಪಡೆ; ಹೆಎಚ್ ಎಲ್ ಸಾಧನೆ ಶ್ಲಾಘಿಸಿದ ಪ್ರಧಾನಿ ಮೋದಿ

ಭಾರತೀಯ ವಾಯು ಸೇನೆಯ ದಶಕಗಳ ಕನಸಾಗಿದ್ದ ಸ್ವದೇಶಿ ನಿರ್ಮಿತ ವಿಮಾನದ ಕನಸನ್ನು ನನಸು ಮಾಡಿದ ಹೆಎಚ್ ಎಲ್ ಮತ್ತು ಎಡಿಎ ಅಧಿಕಾರಿಗಳ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ತೇಜಸ್ ಯುದ್ಧ ವಿಮಾನ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಮತ್ತು ತೇಜಸ್ ಯುದ್ಧ ವಿಮಾನ (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ವಾಯು ಸೇನೆಯ ದಶಕಗಳ ಕನಸಾಗಿದ್ದ ಸ್ವದೇಶಿ ನಿರ್ಮಿತ ವಿಮಾನದ ಕನಸನ್ನು ನನಸು ಮಾಡಿದ ಹೆಎಚ್ ಎಲ್ ಮತ್ತು ಎಡಿಎ ಅಧಿಕಾರಿಗಳ ಸಾಧನೆಯನ್ನು  ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಇಂದು ಸ್ವದೇಶಿ ನಿರ್ಮಿತ ವಿಮಾನ  ತೇಜಸ್ ಅನ್ನು ವಾಯು ಸೇನೆಗೆ ಸೇರ್ಪಡೆಗೊಳಿಸಿದ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ  ನರೇಂದ್ರ ಮೋದಿ ಅವರು, ತೇಜಸ್ ಸೇರ್ಪಡೆ ಭಾರತೀಯರಲ್ಲಿ ಅಪಾರ ಹೆಮ್ಮೆ ಮತ್ತು ಅತಿಯಾದ ಖುಷಿಯನ್ನು ನೀಡಿದೆ. ಸೇನೆಗೆ ತೇಜಸ್ ಸೇರ್ಪಡೆ ಮೂಲಕ ಸ್ವದೇಶಿ ರಕ್ಷಣಾ ಪರಿಕರಗಳ  ಸ್ವದೇಶಿ ನಿರ್ಮಾಣಕ್ಕೆ ಉತ್ತೇಜನ ನೀಡಿದಂತಾಗಿದ್ದು, ನಮ್ಮ ಕೌಶಲ್ಯಗಳನ್ನು ಮತ್ತು ಸಾಮರ್ಥ್ಯವನ್ನು ಇಡೀ ಜಗತ್ತೀಗೆ ಪರಿಚಯಿಸಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಹೆಚ್ ಎಎಲ್ ವ್ಯವಸ್ಥಾಪಕರಾದ ಶ್ರೀಧರನ್ ಅವರು ವಾಯು ಸೇನೆಯ ಮುಖ್ಯಾಧಿಕಾರಿ ಜಸ್ಬೀರ್ ವಾಲಿಯಾ ಅವರಿಗೆ  ತೇಜಸ್ ವಿಮಾನಗಳನ್ನು ಹಸ್ತಾಂತರಿಸಿದರು. ತೇಜಸ್ ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ವಾಯು ಸೇನೆಗೆ ಸೇರ್ಪಡೆಗೊಳಿಸಲಾಯಿತು.ಬಳಿಕ ಎಲ್ಲ ಸಮುದಾಯದ  ಧಾರ್ಮಿಕ ಗುರುಗಳು ಪ್ರಾರ್ಥನೆ ಸಲ್ಲಿಸಿ, ತೇಜಸ್ ಗೆ ಶುಭ ಕೋರಿದರು. ಬಳಿಕ ತೇಜಸ್ ವಿಮಾನವನ್ನೇರಿದ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ಮಾಧವ್ ರಂಗಾಚಾರಿ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com