ಪಾಕಿಸ್ತಾನ ಪರವಾಗಿ ಬೇಹುಗಾರಿಕೆ: 8 ನಿವೃತ್ತ ಸೈನಿಕರ ಬಂಧನ

ಪಾಕಿಸ್ತಾನ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಭಾರತೀಯ ಎಂಟು ನಿವೃತ್ತ ಸೈನಿಕರನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಪಾಕಿಸ್ತಾನ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಭಾರತೀಯ ಎಂಟು ನಿವೃತ್ತ ಸೈನಿಕರನ್ನು ಬಂಧಿಸಲಾಗಿದೆ. 
ಪಾಕಿಸ್ತಾನದ ಗುಪ್ತಚತರ ಇಲಾಖೆಗೆ ಕಳೆದ ಮೂರು ವರ್ಷಗಳಿಂದ ಮಾಹಿತಿ ನೀಡುತ್ತಿದ್ದ ಭಾರತೀಯ 8 ನಿವೃತ್ತ ಸೈನಿಕರನ್ನು ಬಂಧಿಸಲಾಗಿದೆ ಎಂದು ಗೃಹ ಇಲಾಖೆಯ ರಾಜ್ಯ ಸಚಿವ ಹರಿಬಾಯ್‌ ಚೌಧರಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ. 
ಉದ್ಯೋಗಗಳು, ವಿದ್ಯಾರ್ಥಿವೇತನ, ವಿತ್ತೀಯ ಪರಿಗಣನೆ ನೆಪ ಹೇಳುತ್ತಾ, ಸೇವೆಯಲ್ಲಿರುವ ಸೈನಿಕರೊಂದಿಗೆ ಮಾಹಿತಿ ಕಲೆ ಹಾಕುತ್ತಿದ್ದ ಈ ಬಂಧಿತ ನಿವೃತ್ತ ಸೈನಿಕರು ಪಾಕಿಸ್ತಾನ ಗುಪಚರ ಇಲಾಖೆಗೆ ಮಾಹಿತಿ ನೀಡುತ್ತಿದ್ದರು.
ಸೇನೆಯಲ್ಲಿರುವ ಯೋಧರೊಂದಿಗೆ ನಿವೃತ್ತ ಸೈನಿಕರು ಸಂಪರ್ಕದಲ್ಲಿರುತ್ತಾರೆ. ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುವುದು ಸಹಜ. ಆದರೆ, ಈ ಎಂಟು ಮಂದಿ ಇದನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com