ಜೆಎನ್ ಯು ಪ್ರಕರಣ: ವಿಡಿಯೋ ತಿರುಚಿದ್ದು ಸಚಿವೆ ಸ್ಮೃತಿ ಇರಾನಿ ಆಪ್ತೆ!
ನವದೆಹಲಿ: ದೇಶಾದ್ಯಾಂತ ತೀವ್ರ ವಿವಾದವೆಬ್ಬಿಸಿದ್ದ ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಪ್ರಕರಣದಲ್ಲಿ ವಿಡಿಯೋ ತಿರುಚಿರುವುದನ್ನು ವಿಧಿ ವಿಜ್ಞಾನ ಪ್ರಯೋಗಾಲಯ ದೃಢ ಪಡಿಸಿದೆ. ಮಾನವ ಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಆಪ್ತೆ ಈ ವಿಡಿಯೋವನ್ನು ತಿರುಚಿದ್ದಾರೆ ಎಂದು ಆಂಗ್ಲ ವೆಬ್ ಸೈಟ್ ವೊಂದು ವರದಿ ಮಾಡಿದೆ.
ದೃಶ್ಯಗಳಿರುವ ಎರಡು ಫೈಲ್ ಗಳು ಸಮಸ್ಯಾತ್ಮಕವಾಗಿವೆ ಎಂದು ವಿಧಿ ವಿಜ್ಞಾನ ಆಡಿಯೋ-ವಿಡಿಯೋ ದೃಢೀಕರಣ ವರದಿಯಲ್ಲಿ ಸ್ಪಷ್ಟ ಪಡಿಸಲಾಗಿದೆ. ಮೊದಲ ವಿಡಿಯೋವನ್ನು ಕ್ಯೂ1 ಎಂದು ಹೆಸರಿಸಲಾಗಿದ್ದು, ಭಾರತ ವಿರೋಧಿ ಘೋಷಣೆ ಕೂಗಿದ ಕನ್ಹಯ್ಯಾ ಸಿಕ್ಕಿ ಹಾಕಿಕೊಂಡಿದ್ದಾನೆ ಎಂದು ಶೀರ್ಷಿಕೆ ಇದೆ. ಬಳಿಕ ಈ ವಿಡಿಯೋವನ್ನು ಹಲವು ವಾಹಿನಿಗಳು ಯೂ ಟ್ಯೂಬ್ ನಿಂದ ತೆಗೆದುಕೊಂಡು ಪ್ರಸಾರ ಮಾಡಿದ್ದವು.
ಇನ್ನೂ ಕ್ಯೂ2 ಎಂದು ಹೆಸರಿಸರುವ ಮತ್ತೊಂದು ವಿಡಿಯೋವನ್ನು shilpitewari ಎಂಬ ಯುಆರ್ ಎಲ್ ಅಡ್ರೆಸ್ ನಿಂದ ಪಡೆಯಲಾಗಿದೆ. ಶಿಲ್ಪಿ ತಿವಾರಿ ಸಂಘ ಪರಿವಾರದ ಸಿದ್ಧಾಂತ ಪ್ರತಿಪಾದಕಿಯಾಗಿದ್ದಾರೆ ಎಂದು ವರದಿ ಮಾಡಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಅವರ ಪ್ರಚಾರ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿಯಮಾವಳಿಯನ್ನು ಸಡಿಲಿಸಿ ಶಿಲ್ಪಿ ತಿವಾರಿಯನ್ನು ಸಲಹೆಗಾರರನ್ನಾಗಿ ನೇಮಿಸಲಾಗಿತ್ತು, ದೇಶ ವಿರೋಧಿ ಘೋಷಣೆ ಕೂಗಿರುವ ದೃಶ್ಯಾವಳಿ ದಾಖಲಾತಿ ಅಧಿಕೃತವಲ್ಲ ಎಂದು ವರದಿ ಮಾಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ