
ನವದೆಹಲಿ: ಗುಜರಾತ್ ಎನ್ ಕೌಂಟರ್ ಪ್ರಕರಣ ಸಂಬಂಧ 2ನೇ ಅಫಿಡವಿಟ್ ಸಲ್ಲಿಸಿದ್ದ ಯುಪಿಎ ಸರ್ಕಾರದ ನಿರ್ಧಾರವನ್ನು ಕೇಂದ್ರ ಮಾಜಿ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರು ಗುರುವಾರ ಸಮರ್ಥಿಸಿಕೊಂಡಿದ್ದಾರೆ.
ಇಶ್ರಾತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿರುವ ಅವರು, ಎರಡನೇ ಅಫಿಡವಿಟ್ ಸಲ್ಲಿಸುವುದು ಅಪರಾಧವಲ್ಲ. ಮೊದಲ ಪ್ರಮಾಣಪತ್ರವನ್ನು ಐಬಿ ಮತ್ತು ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಆಧಾರದಲ್ಲಿ ಸಲ್ಲಿಸಲಾಗಿದೆ. ಎರಡೇ ಅಫಿಡವಿಟ್ ನ್ನು ತನಿಖಾ ವರದಿ ಆಧಾರದ ಮೇಲೆ ಸಲ್ಲಿಸಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಒಂದು ವೇಳೆ ದೋಷಗಳಿದ್ದಿದ್ದೇ ಆದರೆ ನ್ಯಾಯಾಲಯ ಅದನ್ನು ಗುರ್ತಿಸುತ್ತಿತ್ತು ಎಂದು ಹೇಳಿದ್ದಾರೆ.
ಇದೇ ವೇಳೆ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ವಿರುದ್ಧ ಕಿಡಿಕಾಡಿರುವ ಅವರು, ಪಿಳ್ಳೈ ಅವರು ಈಗ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯವಾದದ್ದು ಎಂದು ಹೇಳಿದ್ದಾರೆ.
Advertisement