ಕಛ್ ಕರಾವಳಿಯಲ್ಲಿ ಪಾಕ್ ಬೋಟ್ ಪತ್ತೆ, ಗುಪ್ತಚರ ಇಲಾಖೆಯಿಂದ ಹೈ ಅಲರ್ಟ್ ಘೋಷಣೆ

ಗುಜರಾತ್ ನ ಕಛ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಭಾರತೀಯ ಗಡಿ ಭದ್ರತಾ ಪಡೆ...
ಅಹಮದಾಬಾದ್: ಗುಜರಾತ್ ನ ಕಛ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಭಾರತೀಯ ಗಡಿ ಭದ್ರತಾ ಪಡೆ(ಬಿಎಸ್​ಎಫ್) ಪಾಕಿಸ್ತಾನಕ್ಕೇ ಸೇರಿದ ಮೀನುಗಾರಿಕಾ ದೋಣಿಯೊಂದನ್ನು ಶನಿವಾರ ವಶಕ್ಕೆ ಪಡೆದುಕೊಂಡಿದೆ.
ಕಛ್ ಕರಾವಳಿ ಪ್ರದೇಶದ ಕೋಟೇಶ್ವರ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್ ಎಫ್ ಯೋಧರನ್ನು ಕಂಡ ತಕ್ಷಣವೇ ದೋಣಿಯಲ್ಲಿ ಇದ್ದವರು ದೋಣಿಯನ್ನು ಬಿಟ್ಟು ಪಾಕ್ ಕಡೆಗೆ ಪರಾರಿಯಾದರು. ಭದ್ರತಾ ಸಿಬ್ಬಂದಿ ಕೂಡಲೇ ದೋಣಿಯನ್ನು ವಶಕ್ಕೆ ಪಡೆದರು ಎಂದು ಬಿಎಸ್​ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ವಶಕ್ಕೆ ಪಡೆದಿರುವ ಪಾಕ್ ದೋಣಿಯಲ್ಲಿ ಯಾವುದೇ ಆಕ್ಷೇಪಾರ್ಹ ಹಾಗೂ ಅನುಮಾನ್ಸಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಬೋಟ್ ನಲ್ಲಿದ್ದ 8ರಿಂದ 10 ಉಗ್ರರು ಭಾರತ ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಗುಪ್ತಚಲ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಕಳೆದ ಐದು ತಿಂಗಳಲ್ಲಿ ಗಡಿ ಪ್ರದೇಶ ಉಲ್ಲಂಘನೆ ಮಾಡಿದ ಪಾಕಿಸ್ತಾನದ ಐದು ಬೊಟುಗಳನ್ನು ಜಪ್ತಿ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com