

ನವದೆಹಲಿ; ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ಬಂಧಿನಕ್ಕೊಳಗಾಗಿ ಮತ್ತೆ ಬಿಡುಗಡೆಗೊಂಡಿದ್ದ ಕನ್ಹಯ್ಯ ಕುರಿತು ವಿ.ಕೆ. ಸಿಂಗ್ ಅವರು ನೀಡಿದ್ದ ಹೇಳಿಕೆ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್ ನಾಯಕರು, ಜೆಎನ್ ಯು ಹೋರಾಟ ವ್ಯಕ್ತಿಗತ ಹೋರಾಟವಲ್ಲ. ಅದೊಂದು ವಿಚಾರಗತ ಹೋರಾಟವಾಗಿದೆ ಎಂದು ಭಾನುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪಿ.ಎಲ್. ಪುಣ್ಯ ಅವರು, ವಿ.ಕೆ. ಸಿಂಗ್ ಅವರ ಈ ಹೇಳಿಕೆ ಅವರಲ್ಲಿರುವ ಅಪರಿಪಕ್ವತೆಯನ್ನು ತೋರಿಸುತ್ತದೆ. ರೋಹಿತ್ ಅಂಬೇಡ್ಕರ್ ಸಂಘದ ಅಧ್ಯಕ್ಷನಾಗಿದ್ದನು. ಇನ್ನು ಕನ್ಹಯ್ಯ ಒಬಿಸಿ ಹಾಗೂ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ಎಐಎಸ್ಎಫ್ ಗೆ ಸೇರಿದವನಾಗಿದ್ದಾನೆ. ಸಿಂಗ್ ಅವರು ಪದ ಬಳಕೆ ಮಾಡುವ ಮೊದಲು ವಿಚಾರ ಮಾಡಬೇಕು ಎಂದು ಹೇಳಿದ್ದಾರೆ.
ಈ ಹಿಂದೆ ಕನ್ಹಯ್ಯ ಬಿಡುಗಡೆಯಾದ ನಂತರ ಹೇಳಿಕೆ ನೀಡಿದ್ದ ರಾಜ್ಯ ವಿದೇಶಾಂಗಗಳ ಸಚಿವ ವಿಕೆ ಸಿಂಗ್ ಅವರು, ಕನ್ಹಯ್ಯ ನನಗೆ ಅಫ್ಜಲ್ ಗುರು ಆದರ್ಶವಲ್ಲ. ಆದರೆ, ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಧಿ ರೋಹಿತ್ ವೇಮುಲ ಆದರ್ಶನಾಗಿದ್ದಾನೆಂದು ಹೇಳಿದ್ದಾನೆ. ರೋಹಿತ್ ವೇಮುಲ ಮುಂಬೈ ಸ್ಫೋಟದ ಆರೋಪಿ ಯಾಕೂಬ್ ಮೆನನ್ ಪರ ಮಾತನಾಡಿದ್ದ. ಹೀಗೆ ಮಾತನಾಡಿದ್ದ ರೋಹಿತ್ ಕನ್ಹಯ್ಯಗೆ ಮಾದರಿಯಾಗಲು ಹೇಗೆ ಸಾಧ್ಯ. ರೋಹಿತ್ ಈ ಹಿಂದೆ ಯಾಕುಬ್ ಮೆನನ್ ಪರ ಸಭೆಯನ್ನು ನಡೆಸಿದ್ದನು ಎಂದು ಹೇಳಿದ್ದರು.