ಅಮೆರಿಕದಲ್ಲಿದ್ದ ಭಾರತದ ಹಣ ಪತ್ತೆ ಮಾಡಿದ ಮನೋಹರ್ ಪರಿಕ್ಕರ್

ಅಮೆರಿಕದಲ್ಲಿ ಪೆಂಟಗನ್ ನಲ್ಲಿ ಬಳಕೆಯಾಗದೆ ಉಳಿದಿದ್ದ ಭಾರತದ ಹಣವನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪತ್ತೆ ಮಾಡಿದ್ದಾರೆ.
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್

ನವದೆಹಲಿ: ಅಮೆರಿಕದಲ್ಲಿ ಪೆಂಟಗನ್ ನಲ್ಲಿ ಬಳಕೆಯಾಗದೆ ಉಳಿದಿದ್ದ ಭಾರತದ ಹಣವನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪತ್ತೆ ಮಾಡಿದ್ದಾರೆ.
ಯುಎಸ್ ನ ಸೇನಾ ಮಾರಾಟ(ಎಫ್ ಎಂಎಸ್) ಯೋಜನೆಯಲ್ಲಿ ಭಾರತ ಸರ್ಕಾರ 3 ಬಿಲಿಯನ್ ಡಾಲರ್  (20096 ಕೋಟಿ ರೂಪಾಯಿ) ಗಳನ್ನು ಇರಿಸಿತ್ತು. ಆದರೆ ಸರಿಯಾದ  ನಿರ್ವಹಣೆ ಇಲ್ಲದ ಅಥವಾ ಅದರ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲವಾದ ಕಾರಣ   ಪೆಂಟಗನ್ ನಲ್ಲಿರುವ ಖಾತೆಯಲ್ಲಿ ಭಾರತದ 3 ಬಿಲಿಯನ್ ಡಾಲರ್ ಹಣ ಹಾಗೆಯೇ ಉಳಿದಿತ್ತು. ಅಷ್ಟೇ ಅಲ್ಲದೇ ಈ ಹಣಕ್ಕೆ ಬಡ್ಡಿಯೂ ಬರುತ್ತಿರಲಿಲ್ಲ ಎಂದು ಸ್ವತಃ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.  
ಅಮೆರಿಕದಲ್ಲಿ ಉಳಿದಿದ್ದ ಹಣವನ್ನು 2015 -16 ರಲ್ಲಿ ರಕ್ಷಣಾ ವೆಚ್ಚಕ್ಕೆ ಬಳಸಿಕೊಳ್ಳಲಾಗಿದ್ದು, ಎಫ್ಎಂ ಎಸ್ ನ ಖಾತೆಯಲ್ಲಿ ಲ್ಲಿರುವ ಮೊತ್ತ 1.7-1.8 ಬಿಲಿಯನ್ ಡಾಲರ್​ನಷ್ಟಾಗಿದೆ ಎಂದು ಪರಿಕ್ಕರ್ ತಿಳಿಸಿದ್ದಾರೆ. ಪೆಂಟಗನ್ ಖಾತೆಯಲ್ಲಿರುವ ಹಣವನ್ನು ಬಳಕೆ ಮಾಡಿಕೊಂಡಿರುವುದರಿಂದ ಬಜೆಟ್​ನಲ್ಲಿ ನೀಡಿರುವ ಹಣ ಉಳಿತಾಯ ಸಾಧ್ಯವಾಗಲಿದೆ ಎಂದಿದ್ದಾರೆ ಪರಿಕ್ಕರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com