ಐಎನ್ ಎಸ್ ವಿರಾಟ್ ಸಮರ ನೌಕೆಯಲ್ಲಿ ಬೆಂಕಿ ಆಕಸ್ಮಿಕ: ಓರ್ವ ನಾವಿಕನ ಸಾವು

ಭಾರತೀಯ ನೌತಾಪಡೆಗೆ ಸೇರಿದ ಯುದ್ಧ ನೌಕೆ ಐಎನ್ ಎಸ್ ವಿರಾಟ್ ಅಲ್ಲಿ ಸಂಭವಸಿದ ಅಗ್ನಿ ಆಕಸ್ಮಿಕದಿಂದಾಗಿ ಓರ್ವ ನಾವಿಕ ಸಾವನ್ನಪ್ಪಿದ ಘಟನೆ ಗೋವಾದಲ್ಲಿ ನಡೆದಿದೆ...
ಐಎನ್ ಎಸ್ ವಿರಾಟ್ ನಲ್ಲಿ ಅಗ್ನಿ ಅವಘಡ (ಸಂಗ್ರಹ ಚಿತ್ರ)
ಐಎನ್ ಎಸ್ ವಿರಾಟ್ ನಲ್ಲಿ ಅಗ್ನಿ ಅವಘಡ (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ನೌತಾಪಡೆಗೆ ಸೇರಿದ ಯುದ್ಧ ನೌಕೆ ಐಎನ್ ಎಸ್ ವಿರಾಟ್ ಅಲ್ಲಿ ಸಂಭವಸಿದ ಅಗ್ನಿ ಆಕಸ್ಮಿಕದಿಂದಾಗಿ ಓರ್ವ ನಾವಿಕ ಸಾವನ್ನಪ್ಪಿದ ಘಟನೆ ಗೋವಾದಲ್ಲಿ ನಡೆದಿದೆ.

ಗೋವಾದ ಕರಾವಳಿ ತೀರದಲ್ಲಿ ನಿಯೋಜನೆಗೊಂಡಿದ್ದ ಐಎನ್ ಎಸ್ ವಿರಾಟ್ ಯುದ್ಧ ನೌಕೆಯಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದ್ದು, ನೌಕೆಯಾದ್ಯಂತ ಭಾರಿ ಪ್ರಮಾಣದ ಹೊಗೆ  ಆವರಿಸಿತ್ತು. ಈ ಅವಘಡದಲ್ಲಿ ನೌಕೆಯಲ್ಲಿದ್ದ ನಾವಿಕ ಮತ್ತು ಮುಖ್ಯ ಇಂಜಿನಿಯರ್ ಅಶು ಸಿಂಗ್ ಅವರು ಸಾವನ್ನಪ್ಪಿದ್ದು, ನೌಕೆಯಲ್ಲಿರುವ ಇತರೆ ಮೂವರು ನಾವಿಕರು ಉಸಿರಾಟ ತೊಂದರೆ  ಅನುಭವಿಸಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.

ನೌಕೆಯ ಬಾಯ್ಲರ್ ಕೊಠಡಿಯಲ್ಲಿ ಅನಿಲ ಸೋರಿಕೆಯಿಂದ ಕಾಣಿಸಿಕೊಂಡ ಬೆಂಕಿಯಿಂದ ನೌಕೆಯಾದ್ಯಂತ ದಟ್ಟ ಹೊಗೆ ಆವರಿಸಿತು. ವಿಷಯ ತಿಳಿದ ತಕ್ಷಣ ಪರಿಸ್ಥಿತಿ ನಿಯಂತ್ರಣಕ್ಕೆ  ತರಲಾಯಿತು ಎಂದು ನೌಕಾದಳದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಅಶು ಸಿಂಗ್​ರನ್ನು ಗೋವಾ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು  ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಕಳೆದ 60 ವರ್ಷಗಳಿಂದ ಐಎನ್​ಎಸ್ ವಿರಾಟ್ ಭಾರತ ನೌಕಾದಳದ ಮುಖ್ಯ ನೌಕೆಗಳಲ್ಲಿ ಒಂದಾಗಿದ್ದು, ಈ ವರ್ಷಾಂತ್ಯದ ವೇಳೆಗೆ ನಿವೃತ್ತಿ ಹೊಂದಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com