ಡೌನ್ ಸಿಂಡ್ರೋಮ್, ಹೃದಯ ಕವಾಟ ಸಮಸ್ಯೆ ಇದೆಯೆಂದು ಹೆತ್ತ ಮಗುವನ್ನೇ ಬಿಟ್ಟು ಹೊರನಡೆದ ಟೆಕ್ಕಿ ದಂಪತಿಗಳು!

ಒಂದುವರೆ ತಿಂಗಳಿನ ಆ ಮಗುವಿನ ಹೆಸರು ಆಶಿಕ, ಅಂದರೆ ದುಃಖವನ್ನು ತಿಳಿಯದವಳು ಎಂದು. ಆದರೆ ಕೇವಲ ಒಂದುವರೆ ತಿಂಗಳಿನ ಮಗುವಾಗಿರುವುದರಿಂದ ಅವಳಿಗೆ ತನಗೆ ಬಂದೊದಗಿರುವ ದುಃಖದ ಬಗ್ಗೆ ಅರಿವೇ ಇಲ್ಲ...
ಡೌನ್ ಸಿಂಡ್ರೋಮ್, ಹೃದಯ ಕವಾಟ ಸಮಸ್ಯೆ ಇದೆಯೆಂದು ಹೆತ್ತ ಮಗುವನ್ನೇ ಬಿಟ್ಟು ಹೊರನಡೆದ ಟೆಕ್ಕಿ ದಂಪತಿಗಳು!
ಡೌನ್ ಸಿಂಡ್ರೋಮ್, ಹೃದಯ ಕವಾಟ ಸಮಸ್ಯೆ ಇದೆಯೆಂದು ಹೆತ್ತ ಮಗುವನ್ನೇ ಬಿಟ್ಟು ಹೊರನಡೆದ ಟೆಕ್ಕಿ ದಂಪತಿಗಳು!
Updated on

ಚೆನ್ನೈ: ಒಂದುವರೆ ತಿಂಗಳಿನ ಆ ಮಗುವಿನ ಹೆಸರು ಆಶಿಕ, ಅಂದರೆ ದುಃಖವನ್ನು ತಿಳಿಯದವಳು ಎಂದು. ಆದರೆ ಕೇವಲ ಒಂದುವರೆ ತಿಂಗಳಿನ ಮಗುವಾಗಿರುವುದರಿಂದ ಅವಳಿಗೆ ತನಗೆ ಬಂದೊದಗಿರುವ ದುಃಖದ ಬಗ್ಗೆ ಅರಿವೇ ಇಲ್ಲ.

ಮಗು ಎಂಥಹದ್ದೇ ಪರಿಸ್ಥಿತಿಯಲ್ಲಿದ್ದರೂ ಪೋಷಕರು ಅದನ್ನು ಪಾಲಿಸುತ್ತಾರೆ. ಮಗುವಿನ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ಚೆನ್ನೈ ನ ಆಶಿಕಳ ಪೋಷಕರಾಗಿರುವ ಟೆಕ್ಕಿ ದಂಪತಿಗಳಿಗೆ ಡೌನ್ ಸಿಂಡ್ರೋಮ್, ಹೃದಯ ಕವಾಟ ಸಮಸ್ಯೆ, ಥೈರಾಯ್ಡ್ ಗ್ರಂಥಿ ಹಾಗೂ ಕಿಡ್ನಿಗಳಲ್ಲಿ ಸಣ್ಣಪುಟ್ಟ ಗಾಯಗಳಿರುವ ಮಗಳು ಭಾರವಾಗಿದ್ದಾಳೆ. ಆದ ಕಾರಣ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.

ಮಗಳಿಗೆ ಹಲವು ರೀತಿಯ ಸಮಸ್ಯೆಗಳಿರುವುದು ತಿಳಿಯುತ್ತಿದ್ದಂತೆಯೇ ಮಕ್ಕಳ ಕಲ್ಯಾಣ ಸಮಿತಿಗೆ ತಂದೊಪ್ಪಿಸಲು ಮುಂದಾದ ಪೋಷಕರನ್ನು ಎಷ್ಟೇ ವಿಧದಲ್ಲಿ ಮನವರಿಕೆ ಮಾಡಿದರೂ ಪ್ರಯೋಜನವಾಗಲಿಲ್ಲ. ಮಕ್ಕಳ ಕಲ್ಯಾಣ ಸಮಿತಿಗೆ ಆಶಿಕಳನ್ನು ಒಪ್ಪಿಸಿದ ಎರಡು ದಿನಗಳ ನಂತರ ಸರ್ಕಾರದಿಂದ ಮಾನ್ಯತೆ ಪಡೆದಿರುವ ಕೆಂದ್ರಕ್ಕೆ ನೀಡಲಾಗಿದೆ. 
ಒಂದುವರೆ ತಿಂಗಳ ಮಗುವನ್ನು ಆಂಬುಲೆನ್ಸ್ ನಲ್ಲಿ ಇಲ್ಲಿಗೆ ಕರೆತರಲಾಯಿತು, ಅದರ ಹಿನ್ನೆಲೆ ಕೇಳಿ ನೋವುಂಟಾಗಿದೆ, ತಕ್ಷಣವೇ ಆ ಮಗುವಿಕೆ ಆಶಿಕ ಎಂದು ನಾಮಕರಣ ಮಾಡಲಾಯಿತು. ಆಶಿಕ ಎಂದರೆ ದುಃಖವನ್ನು ತಿಳಿಯದವಳು ಎಂದು ಮಕ್ಕಳ ಕೇಂದ್ರದ ಸದಸ್ಯರೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.

ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಆಶಿಕಗೆ ಪ್ರತಿ ಮೂರು ಗಂಟೆಗಳಿಗೊಮ್ಮೆ ಸಿರಿಂಜ್ ಮೂಲಕ ಆಹಾರ ನೀಡಲಾಗುತ್ತಿದೆ. ಆಶಿಕ ಹುಟ್ಟಿದ್ದು ಜನವರಿ 22 ರಂದು, ಶ್ರೀಮಂತ ಕುಟುಂಬದಲ್ಲಿ. ಆಕೆಯ ಪೋಷಕರಿಬ್ಬರೂ ಐಟಿ ಉದ್ಯೋಗಿಗಳು, ಮಗುವಿಗೆ ಹಲವು ರೀತಿಯ ಸಮಸ್ಯೆಗಳಿಗೆ ಎಂದು ಅರಿಯುತ್ತಿದ್ದಂತೆಯೇ ಪೋಷಕರು ವೈದ್ಯರನ್ನು ಸಂಪರ್ಕಿಸಿದ್ದಾರೆ. ಮಗುವನ್ನು ಗುಣಪಡಿಸುವುದಕ್ಕಾಗಿ ಶಸ್ತ್ರಚಿಕಿತ್ಸೆ ನಡೆಸಲು ಸುಮಾರು 4.75  ರೂ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದರು. ಅಲ್ಲದೇ ಶಸ್ತ್ರಚಿಕಿತ್ಸೆ ಶೇ.100 ರಷ್ಟು ಯಶಸ್ವಿಯಾಗುವ ಬಗ್ಗೆಯೂ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಪೋಷಕರು ಶಸ್ತ್ರಚಿಕಿತ್ಸೆ ಮಾಡಿಸುವ ಬದಲು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ನಾವು ಮಗುವಿನ ಸುಧಾರಣೆ ಬಗ್ಗೆ ಮನವರಿಕೆ ಮಾಡಿಕೊಟ್ಟರಾದರೂ ಪೋಷಕರು ಹಾಗೂ ಅವರ ಕುಟುಂಬದವರು ಅದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮಕ್ಕಳ ಕಲ್ಯಾಣ ಸಮಿತಿಯವರು ಮನವೊಲಿಕೆ ಮಾಡಲು ಮುಂದಾದಾಗ ಮಗುವನ್ನು ಬೀದಿಯಲ್ಲಿ ಬಿಡುವ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ಡೌನ್ ಸಿಂಡ್ರೋಮ್ ಅಂದರೆ:  ಡೌನ್ ಸಿಂಡ್ರೋಮ್ ಒಂದು ಆನುವಂಶಿಕ ಖಾಯಿಲೆ ಅಥವಾ ವರ್ಣತಂತುವಿನಲ್ಲಿ ಕಂಡುಬರುವ ಅಸ್ವಸ್ಥತೆ. ದೇಹದಲ್ಲಿ ಒಂದು ಜೊತೆ ವರ್ಣತಂತುಗಳು ಹೆಚ್ಚಾಗಿ ಇರುವ ಕಾರಣಕ್ಕೆ ಉಂಟಾಗುವ ಇದು ಜೀವಮಾನವಿಡೀ ಕಾಡುವ ಖಾಯಿಲೆ. 
ಸಾಮಾನ್ಯವಾಗಿ, ಮಗುವೊಂದು 46 ವರ್ಣತಂತುಗಳೊಂದಿಗೆ(ಕ್ರೋಮೋಸೋಮ್) ಜನಿಸುತ್ತದೆ. ಮಗುವೊಂದು ಆನುವಂಶಿಕವಾಗಿ, ತಂದೆಯಿಂದ 23 ವರ್ಣತಂತುಗಳ ಸಮೂಹ ಮತ್ತು ತಾಯಿಯಿಂದ 23 ವರ್ಣತಂತುಗಳ ಸಮೂಹವನ್ನು ಪಡೆದುಕೊಳ್ಳುತ್ತದೆ. ಡೌನ್ ಸಿಂಡ್ರೋಮ್ ಹೊಂದಿರುವ ಮಗು 21ನೆಯ ವರ್ಣತಂತುವಿನ ಹೆಚ್ಚಿನ ಜೋಡಿಯೊಂದನ್ನು ಹೊಂದಿರುತ್ತದೆ. ಇದರಿಂದಾಗಿ ಎಲ್ಲ ಸೇರಿ ಒಟ್ಟೂ 47 ವರ್ಣತಂತುಗಳಾಗುತ್ತವೆ. ಆನುವಂಶಿಕವಾದ ಈ ವ್ಯತ್ಯಾಸದಿಂದಾಗಿ ದೈಹಿಕ ಬೆಳವಣಿಗೆ ಹಾಗೂ ಮೆದುಳಿನ ಅಭಿವೃದ್ಧಿಯಲ್ಲಿ ಹಿನ್ನಡೆಯುಂಟಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com