ಪಾಕ್ ವಶದಲ್ಲಿರುವ ಬೋಟ್ ಗಳ ಹಾಳಾಗಿದ್ದು, ಸಣ್ಣಪುಟ್ಟ ರಿಪೇರಿ ಮಾಡುವ ಅಗತ್ಯ ಇದ್ದು, ಈ ಸಂಬಂಧ ನಾವು ಕರಾಚಿ ಮೂಲದ ಬೋಟ್ ವ್ಯಾಪಾರಿಗಳು ಮತ್ತು ಮೆಕ್ಯಾನಿಕ್ ಗಳನ್ನು ಸಂಪರ್ಕಿಸಿದ್ದೇವೆ ಎಂದು ಚೌಧರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಲ್ಲದೆ ಒಟ್ಟು 22 ಬೋಟ್ ಗಳ ರಿಪೇರಿಗಾಗಿ ಸುಮಾರು 44 ಲಕ್ಷ ರುಪಾಯಿ ವೆಚ್ಚವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಅವರು ಗುಜರಾತ್ ಸರ್ಕಾರಕ್ಕೆ ವರದಿ ಸಲಿಸಲಿದ್ದಾರೆ ಎಂದರು.