

ಭೋಪಾಲ್: ಏರ್ ಇಂಡಿಯಾ ವಿಮಾನದ ಇಂಜಿನ್ಗೆ ಪಕ್ಷಿಯೊಂದು ಸಿಕ್ಕಿಹಾಕಿಕೊಂಡು ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಮಧ್ಯಪ್ರದೇಶದ ಭೋಪಾಲ್ನ ರಾಜಾ ಭೋಜ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಮುಂಬೈನಿಂದ ಹಾರಾಟ ಪ್ರಾರಂಭಿಸಿದ್ದ ಏರ್ ಇಂಡಿಯಾ 634 ವಿಮಾನದಲ್ಲಿ ತಾಂತ್ರಿಕ ದೋಷವಿದ್ದು, ಕೆಲವೇ ನಿಮಿಷಗಳಲ್ಲಿ ಸರಿಪಡಿಸಲಾಗುವುದು ಮತ್ತು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಏರ್ ಇಂಡಿಯಾದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ತಾಂತ್ರಿಕ ದೋಷ ಹಿನ್ನೆಲೆ ಪ್ರಯಾಣಿಕರು ತಂಗಲು ಹೊಟೇಲ್ ವ್ಯವಸ್ಥೆ ಮಾಡಲಾಗಿದೆ.