ಕೇರಳಕ್ಕೆ ಬಂದ ಮೊದಲ ದಿನವೇ ಕೋಟಿ ರೂ ಲಾಟರಿ ಬಹುಮಾನ ಗೆದ್ದ ಬಂಗಾಳದ ಯುವಕ!

ಪಶ್ಚಿಮ ಬಂಗಾಳದಿಂದ ಕೆಲಸ ಅರಸಿ ಕೇರಳಕ್ಕೆ ಬಂದ ವ್ಯಕ್ತಿಯೊಬ್ಬನ ಅದೃಷ್ಟ ಒಂದೇ ದಿನದಲ್ಲಿ ಬದಲಾಗಿದೆ.
ಕೇರಳಕ್ಕೆ ಬಂದ ಮೊದಲ ದಿನವೇ ಕೋಟಿ ರೂ ಲಾಟರಿ ಬಹುಮಾನ ಗೆದ್ದ ಬಂಗಾಳದ ಯುವಕ!
ಕೇರಳಕ್ಕೆ ಬಂದ ಮೊದಲ ದಿನವೇ ಕೋಟಿ ರೂ ಲಾಟರಿ ಬಹುಮಾನ ಗೆದ್ದ ಬಂಗಾಳದ ಯುವಕ!

ಕೋಯಿಕ್ಕೋಡ್: ಪಶ್ಚಿಮ ಬಂಗಾಳದಿಂದ ಕೆಲಸ ಅರಸಿ ಕೇರಳಕ್ಕೆ ಬಂದ ವ್ಯಕ್ತಿಯೊಬ್ಬನ ಅದೃಷ್ಟ ಒಂದೇ ದಿನದಲ್ಲಿ ಬದಲಾಗಿದೆ. ಕೆಲಸ ಹುಡುಕಲು ಬಂದ ವ್ಯಕ್ತಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಮೌಲ್ಯದ ಲಾಟರಿ ಬಹುಮಾನ ದೊರೆತಿದೆ.
ಮೊಫಿಜುಲ್ ರೆಹಮಾನ್ ಶೇಖ್ ಎಂಬ ಯುವಕ ಕೇರಳಕ್ಕೆ ಬಂದೊಂಡನೆಯೇ ಲಾಟರಿ ಟಿಕೆಟ್ ಖರೀದಿಸಿದ್ದಾನೆ, ಮುಂದಿನ ದಿನ ಆತ ಖರೀದಿಸಿದ್ದ ಲಾಟರಿ ಟಿಕೆಟ್ ಗೇ ಒಂದು ಕೋಟಿ ರೂ ಬಹುಮಾನ ಘೋಷಣೆಯಾಗಿದೆ. ಲಾಟರಿಯಲ್ಲಿ ವಿಜೇತನಾಗಿ ಘೋಷಣೆಯಾದಾಗಿನಿಂದ ಆತ ಚೆವಾಯೂರ್ ಪೊಲೀಸ್ ಠಾಣೆಯಲ್ಲೇ ಆಶ್ರಯ ಪಡೆದಿದ್ದಾನೆ.
ಮಾ.4 ರಂದು ಕೇರಳಕ್ಕೆ ಬಂದಿದ್ದ ರೆಹಮಾನ್ ಶೇಖ್, 50 ರೂಪಾಯಿಗೆ ಲಾಟರಿ ಟಿಕೆಟ್ ಖರೀದಿಸಿದ್ದ, ಆದರೆ ಮಾ.5 ರಂದು ಅದೇ ಟಿಕೆಟ್ ಗೆ ಒಂದು ಕೋಟಿ ರೂ ಬಹುಮಾನ ಬಂದಿರುವುದು ಆತನಿಗೂ ಅಚ್ಚರಿ ಮೂಡಿಸಿದೆ. ಕೇರಳಕ್ಕೆ ಬಂದು ಕೆಲವು ತಿಂಗಳುಗಳು ಕೆಲಸ ಮಾಡಿ ವಾಪಸ್ ಹೋಗುವುದಷ್ಟೇ ನನ್ನ ಉದ್ದೇಶವಾಗಿತ್ತು. ಆದರೆ ಲಾಟರಿ ಬಹುಮಾನ ನನಗೆ ಅಚ್ಚರಿ ಮೂಡಿಸಿದೆ ಎಂದು ರೆಹಮಾನ್ ಶೇಖ್ ತಿಳಿಸಿದ್ದಾರೆ.
ಬಂಗಾಳದಲ್ಲೂ ನಾನು ಲಾಟರಿ ಟಿಕೆಟ್ ಖರೀದಿಸುತ್ತಿದ್ದೆ. ಆದರೆ ಗೆದ್ದಿರುವುದು ಇದೇ ಮೊದಲ ಬಾರಿಗೆ, ಈ ಹಣದಲ್ಲಿ ಮನೆ ಹಾಗೂ ಕೃಷಿ ಭೂಮಿಯನ್ನು ಖರೀದಿಸುವುದಾಗಿ ರೆಹಮಾನ್ ಶೇಖ್ ತಿಳಿಸಿದ್ದಾರೆ. ಲಾಟರಿ ಟಿಕೆಟ್ ಕಳ್ಳತನವಾಗಬಹುದು ಎಂಬ ಆತಂಕದಿಂದ ರೆಹಮಾನ್ ತನಗೆ ಕೆಲಸ ನೀಡಿದ ಬಿಲ್ಡರ್ ನೊಂದಿಗೆ ಚೆವಾಯೂರ್ ಪೊಲೀಸ್ ಠಾಣೆಗೆ ಬಂದಿದ್ದಾರೆ ಎಂದು ಎಸ್ ಐ ಎವಿ ಜಾನ್ ತಿಳಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ತೆರೆದಿರುವ ರೆಹಮಾನ್ ಟಿಕೆಟ್ ಜಮಾ ಮಾಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com