ಬೈಚುಂಗ್ ಬುಟಿಯಾ ಪಶ್ಚಿಮ ಬಂಗಾಳದ ಮತದಾರನಲ್ಲ: ಸಿಲಿಗುರಿಯಿಂದ ಸ್ಪರ್ಧಿಸಲು ರೆಡ್ ಕಾರ್ಡ್ ಎದುರಿಸುವ ಸಾಧ್ಯತೆ
ಕೋಲ್ಕತಾ: ಪಶ್ಚಿಮ ಬಂಗಾಳದ ವಿಧಾನಸಭೆಗೆ ಭಾರತಿಯ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಬುಟಿಯಾ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಇದಕ್ಕೆ ತಾಂತ್ರಿಕ ತೊಡಕು ಉಂಟಾಗಿದೆ.
ಸಿಕ್ಕಿಂ ನ ಮತದಾರರಾಗಿರುವ ಬೈಚುಂಗ್ ಬುಟಿಯಾ, ಮಾ.29 ರ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಮತದಾರರ ಗುರುತಿನ ಚೀಟಿ ಪಡೆಯದೇ ಇದ್ದರೆ, ಚುನಾವಣಾ ಕಣದಿಂದ ಹೊರಗುಳಿಯಬೇಕಾಗುತ್ತದೆ. ಆದ್ದರಿಂದ ಬೈಚುಂಗ್ ಬುಟಿಯಾ ಈಗ ಪಶ್ಚಿಮ ಬಂಗಾಳದಲ್ಲಿ ಮತದಾರರ ಗುರುತಿನ ಚೀಟಿ ಪಡೆಯಲು ಅಗತ್ಯವಿರುವ ವಾಸಸ್ಥಾನಕ್ಕಾಗಿ ಹುಡುಕಾಟ ನಡೆದಿದ್ದಾರೆ.
ಈಸ್ಟ್ ಬೆಂಗಾಲ್ ಕ್ಲಬ್ ಗೆ ಹಲವು ವರ್ಷಗಳು ಆಡಿರುವ ಬೈಚುಂಗ್ ಬುಟಿಯಾರನ್ನು ಸ್ಥಳೀಯರೆಂದೇ ಗುರುತಿಸಲಾಗುತ್ತದೆ. ಆದರೆ ಅವರು ದಕ್ಷಿಣ ಸಿಕ್ಕಿಂ ನ ಮತದಾರ. ಲೋಕಸಭಾ ಚುನಾವಣೆಯಲ್ಲಿ ಡಾರ್ಜಿಲಿಂಗ್ ನಿಂದ ಸ್ಪರ್ಧಿಸಿದ್ದ ಬುಟಿಯಾ, ಬಿಜೆಪಿ ಅಭ್ಯರ್ಥಿ ವಿರುದ್ಧ ಸೋತಿದ್ದರು, ಪಶ್ಚಿಮ ಬಂಗಾಳದ ಮತದಾರರ ಗುರುತಿನ ಚೀಟಿ ಹೊಂದಿರದ ಕಾರಣ ಅವರಿಗೆ ಮತ ಚಲಾವಣೆ ಮಾಡುವುದಕ್ಕೂ ಸಾಧ್ಯವಾಗಿರಲಿಲ್ಲ.
ಬೈಚುಂಗ್ ಬುಟಿಯಾರ ಹೆಸರನ್ನು ಘೋಷಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಲೋಕಸಭಾ ಚುನಾವಣೆ ವೇಳೆ ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಯಾರೂ ಒಪ್ಪಿರಲಿಲ್ಲ. ಆದರೆ ಬೈಚುಂಗ್ ಬುಟಿಯಾ ಒಪ್ಪಿಗೆ ಸೂಚಿಸಿದ್ದರು, ಈಗ ಸಿಲಿಗುರಿ ಕ್ಷೇತ್ರದಿಂದ ಅಲ್ಲಿನ ಮೇಯರ್ ಆಗಿರುವ ಸಿಪಿಐ(ಎಂ) ನ ಅಶೋಕ್ ಭಟ್ಟಾಚಾರ್ಯ ವಿರುದ್ಧ ಸ್ಪರ್ಧಿಸಬೇಕು ಎಂದು ಹೇಳಿದ್ದಾರೆ. ಈ ಹಿಂದೆ ನಾನು ಸಿಕ್ಕಿಂ ನ ಮತದಾರನಾಗಿದ್ದೆ. ಆದರೆ ಈಗ ಇಲ್ಲ, ನಾನು ಎಲ್ಲಿಯ ಮತದಾರ ಎಂಬುದನ್ನು ಶೀಘ್ರವೇ ಬಹಿರಂಗಗೊಳಿಸುತ್ತೇನೆ ಎಂದು ಬೈಚುಂಗ್ ಬುಟಿಯಾ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ