ಜಿಎಸ್ ಟಿ ಮಂಡಿಸಿ ಕ್ರೆಡಿಟನ್ನೂ ನೀವೇ ಪಡೆಯಿರಿ: ರಾಹುಲ್'ಗೆ ಬಿಜೆಪಿ

ಕೇಂದ್ರ ಸರ್ಕಾರ ಇಪಿಎಫ್ ಮೇಲಿನ ತೆರಿಗೆ ಹಿಂಪಡೆಯಲು ನಾನೇ ಕಾರಣ. ನನ್ನ ಒತ್ತಡಕ್ಕೆ ಮಣಿದು ಸರ್ಕಾರ ಯೋಜನೆಯನ್ನು ಹಿಂಪಡೆದಿದೆ ಎಂದು ಹೇಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ತಿರುಗೇಟಿ ನೀಡಿದೆ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ

ನವದೆಹಲಿ: ಕೇಂದ್ರ ಸರ್ಕಾರ ಇಪಿಎಫ್ ಮೇಲಿನ ತೆರಿಗೆ ಹಿಂಪಡೆಯಲು ನಾನೇ ಕಾರಣ. ನನ್ನ ಒತ್ತಡಕ್ಕೆ ಮಣಿದು ಸರ್ಕಾರ ಯೋಜನೆಯನ್ನು ಹಿಂಪಡೆದಿದೆ ಎಂದು ಹೇಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ತಿರುಗೇಟಿ ನೀಡಿದೆ.

ಬಜೆಟ್ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಾರ್ಮಿಕರ ಭವಿಷ್ಯ ನಿಥಿ ಮೇಲೆ ತೆರಿಗೆ ಹೇರಿಕೆ ಕುರಿತಂತೆ ಪ್ರಸ್ತಾಪವನ್ನು ಮಾಡಿದ್ದರು. ಈ ಯೋಜನೆಗೆ ಹಲವು ವಿರೋಧಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಮರುಪರಿಶೀಲನೆ ಮಾಡುವುದಾಗಿ ತಿಳಿಸಿದ್ದ ಜೇಟ್ಲಿ ಅವರು ಯೋಜನೆಯನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಇದಕ್ಕೆ ರಾಹುಲ್ ಗಾಂಧಿಯವರು ನನ್ನ ಒತ್ತಡಕ್ಕೆ ಮಣಿದು ಸರ್ಕಾರ ಯೋಜನೆಯನ್ನು ಹಿಂಪಡೆದಿದೆ ಎಂದು ಹೇಳಿದ್ದರು.

ನಂತರ ರಾಹುಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಜೇಟ್ಲಿ ಅವರು ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಸಾಮಾಜಿಕ ಭದ್ರತೆ ಸೃಷ್ಟಿಯಲ್ಲಿ ಏನನ್ನೂ ಮಾಡಲಿಲ್ಲ ಎಂದು ಆರೋಪಿಸಿದ್ದರು. ಅಲ್ಲದೆ, ಇಪಿಎಫ್ ತೆರಿಗೆ ಹಿಂಪಡೆಯಲು ನನ್ನ ಒತ್ತಡವೇ ಕಾರಣ ಎಂದು ಹೇಳಿಕ್ಕ ರಾಹುಲ್ ಹೇಳಿಕೆಯನ್ನು ತಿರಸ್ಕರಿಸಿದ್ದರು.

ಇದೀಗ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿರುವ ವೆಂಕಯ್ಯ ನಾಯ್ಡು ಅವರು, ಸಂಸತ್ತಿನಲ್ಲಿ ನಡೆಯುತ್ತಿರುವ ಕಲಾಪವನ್ನು ಸುಗಮವಾಗಿ ಸಾಗಲು ಬಿಟ್ಟು, ಜಿಎಸ್ ಟಿ ಮತ್ತು ಇತರ ಮಸೂದೆಗಳ ಮಂಡನೆಯಾಗುವಂತೆ ಮಾಡಲಿ ಮತ್ತು ಅದರ ಕ್ರೆಡಿಟನ್ನೂ ಅವರೇ ತೆಗೆದುಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ರಾಹುಲ್ ದೇಶದ ಬಡವರಿಗೆ ನೋವುಂಟು ಮಾಡುತ್ತಿದ್ದಾರೆ. ಸಂಸತ್ತಿನಲ್ಲಿ ಮಂಡನೆಯಾಗುತ್ತಿರುವುದು ಬಿಜೆಪಿಯ ಮಸೂದೆಗಳಲ್ಲ. ದೇಶದ ಮಸೂದೆಗಳು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com