ಜಾಟ್ ಪ್ರತಿಭಟನೆಯಿಂದ ರೈಲ್ವೆ ಇಲಾಖೆಗೆ 55 .92 ಕೋಟಿ ನಷ್ಟ: ಸುರೇಶ್ ಪ್ರಭು

ಹರ್ಯಾಣದಲ್ಲಿ ನಡೆದ ಜಾಟ್ ಸಮುದಾಯದ ಪ್ರತಿಭಟನೆಯ ಪರಿಣಾಮ ರೈಲ್ವೆ ಇಲಾಖೆಗೆ 55.92 ಕೋಟಿ ನಷ್ಟ ಉಂಟಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ಜಾಟ್ ಪ್ರತಿಭಟನೆಯಿಂದ ರೈಲ್ವೆ ಇಲಾಖೆಗೆ 55 .92 ಕೋಟಿ ನಷ್ಟ: ಸುರೇಶ್ ಪ್ರಭು
ಜಾಟ್ ಪ್ರತಿಭಟನೆಯಿಂದ ರೈಲ್ವೆ ಇಲಾಖೆಗೆ 55 .92 ಕೋಟಿ ನಷ್ಟ: ಸುರೇಶ್ ಪ್ರಭು

ನವದೆಹಲಿ: ಹರ್ಯಾಣದಲ್ಲಿ ನಡೆದ ಜಾಟ್ ಸಮುದಾಯದ ಪ್ರತಿಭಟನೆಯ ಪರಿಣಾಮ ರೈಲ್ವೆ ಇಲಾಖೆಗೆ 55.92 ಕೋಟಿ ನಷ್ಟ ಉಂಟಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಹರ್ಯಾಣ ಮಾರ್ಗವಾಗಿ ಸಂಚರಿಸುವ ಒಟ್ಟು 2 ,314 ರೈಲುಗಳನ್ನು ರದ್ದುಗೊಳಿಸಬೇಕಾಯಿತು. ಇದರೊಂದಿಗೆ ಆಸ್ತಿ ಹಾನಿ ಸೇರಿದಂತೆ ಒಟ್ಟು ರೈಲ್ವೆ ಇಲಾಖೆಗೆ 55 .92 ಕೋಟಿ ನಷ್ಟ ಉಂಟಾಗಿದೆ ಎಂದು ಸುರೇಶ್ ಪ್ರಭು ಲೋಕಸಭೆಯಲ್ಲಿ ಹೇಳಿದ್ದಾರೆ.
ಫೆ.12 -24 ವರೆಗೆ ನಡೆದ ಪ್ರತಿಭಟನೆಗಳಿಂಡ ಒಟ್ಟು 2 ,134  ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಯಿತು. ಈ ಪೈಕಿ 430 ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದರೆ 259 ಎಕ್ಸ್ ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು ಎಂದು ಸುರೇಶ್ ಪ್ರಭು ಮಾಹಿತಿ ನೀಡಿದ್ದಾರೆ. ರೈಲ್ವೆ ಇಲಾಖೆ ಆಸ್ತಿಗೆ ಹಾನಿ ಉಂಟು ಮಾಡುವವರಿಗೆ ದಂಡ ವಿಧಿಸುವ ವ್ಯವಸ್ಥೆ ರೈಲ್ವೆ ಇಲಾಖೆಯಲ್ಲಿ ಇಲ್ಲ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com