ಸ್ವಚ್ಛ ಭಾರತ: ಸಾರ್ವಜನಿಕ ಶೌಚಾಲಯ ಪತ್ತೆಗೆ ಬಂತು ಹೊಸ ಆ್ಯಪ್

ರಸ್ತೆಗಳಲ್ಲಿ ಮೂತ್ರ ವಿಸರ್ಜನೆ ಮಾಡಿ ರಸ್ತೆಗಳ ಸೌಂದರ್ಯಗಳನ್ನು ಹಾಳು ಮಾಡುವ ಜನರನ್ನು ತಡೆಯುವ ಸಲುವಾಗಿ ಹೊಸ ಆ್ಯಪ್ ವೊಂದು ಬಂದಿದ್ದು, ಲೆ.ಜ.ನಜೀಬ್ ಜಂಗ್ ಅವರು ಅಪ್ಲಿಕೇಶನ್'ನ್ನು ಬುಧವಾರ ಬಿಡುಗಡೆಗೊಳಿಸಿದ್ದಾರೆ...
ಸ್ವಚ್ಛ ಭಾರತ: ಸಾರ್ವಜನಿಕ ಶೌಚಾಲಯ ಪತ್ತೆಗೆ ಬಂತು ಹೊಸ ಆ್ಯಪ್
ಸ್ವಚ್ಛ ಭಾರತ: ಸಾರ್ವಜನಿಕ ಶೌಚಾಲಯ ಪತ್ತೆಗೆ ಬಂತು ಹೊಸ ಆ್ಯಪ್

ನವದೆಹಲಿ: ರಸ್ತೆಗಳಲ್ಲಿ ಮೂತ್ರ ವಿಸರ್ಜನೆ ಮಾಡಿ ರಸ್ತೆಗಳ ಸೌಂದರ್ಯಗಳನ್ನು ಹಾಳು ಮಾಡುವ ಜನರನ್ನು ತಡೆಯುವ ಸಲುವಾಗಿ ಹೊಸ ಆ್ಯಪ್ ವೊಂದು ಬಂದಿದ್ದು, ಲೆ.ಜ.ನಜೀಬ್ ಜಂಗ್ ಅವರು ಅಪ್ಲಿಕೇಶನ್'ನ್ನು ಬುಧವಾರ ಬಿಡುಗಡೆಗೊಳಿಸಿದ್ದಾರೆ,

ಇದೀಗ ಬಿಡುಗಡೆಗೊಂಡಿರುವ ಹೊಸ ಆ್ಯಪ್ ದೆಹಲಿಯ ಎಲ್ಲಾ ಸಾರ್ವಜನಿಕ ಶೌಚಾಲಯಗಳು ಹಾಗೂ ಅದರ ಸೇವೆಗಳನ್ನು ತಿಳಿಸಲಿದೆ. ಇದರಂತೆ ಆ್ಯಪ್ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿರುವ ನಜೀಬ್ ಅವರು, ಆ್ಯಪ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೆಹಲಿಯ ಎಲ್ಲಾ ಸಾರ್ವಜನಿಕ ಶೌಚಾಲಯಗಳು ಹಾಗೂ ಇದರ ಸೇವೆಗನ್ನು ಈ ಆ್ಯಪ್ ನಲ್ಲಿ ಅಪ್ ಗ್ರೇಡ್ ಮಾಡುವಂತೆ ಮೂರು ಪುರಸಭೆಗಳಿಗೆ ಮನವಿ ಮಾಡಿದ್ದಾರೆ.

ಈ ಆ್ಯಪ್'ಗೆ ಫೈಂಡ್ ಎ ಟಾಯ್ಲೆಟ್ ಎಂಬ ಹೆಸರನ್ನಿಡಲಾಗಿದ್ದು, 1000 ಶೌಚಾಲಯಗಳ ಸ್ಥಳ ಮತ್ತು ಮಾಹಿತಿಯನ್ನು ಈ ಆ್ಯಪ್ ನೀಡುತ್ತದೆ. ಈ ಮೊಬೈಲ್ ಆ್ಯಪ್ ಜಿಪಿಎಸ್ ಮೂಲಕ ಸಮೀಪದ ಸಾರ್ವಜನಿಕ ಶೌಚಾಲಯಗಳನ್ನು ಪತ್ತೆ ಹಚ್ಚುತ್ತದೆ. ಬಳಿಕ ಅಲ್ಲಿಗೆ ತಲುಪಲು ನಿಖರವಾದ ಮಾರ್ಗವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com