ಶೋಷಣೆ ನಿಮ್ಮ ರಕ್ತದಲ್ಲಿಯೇ ಇದೆ: ಮಲ್ಯಗೆ ಪತ್ರ ಬರೆದ ಮಹಿಳೆಯರು

ಮಹಿಳಾ ದಿನಾಚರಣೆ ದಿನದಂದು ಮದ್ಯದ ದೊರೆಗೆ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯ ಮಹಿಳೆಯರು ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ಮಲ್ಯ ಅವರನ್ನು...
ವಿಜಯ್ ಮಲ್ಯ
ವಿಜಯ್ ಮಲ್ಯ
Updated on

ಮುಂಬೈ: ಮಹಿಳಾ ದಿನಾಚರಣೆ ದಿನದಂದು ಮದ್ಯದ ದೊರೆಗೆ ಕಿಂಗ್ ಫಿಷರ್ ಏರ್ ಲೈನ್ಸ್ ಸಂಸ್ಥೆಯ ಮಹಿಳೆಯರು ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ಮಲ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ತಿಳಿದುಬಂದಿದೆ.

ಪತ್ರ ಬರೆದಿರುವ ಮಹಿಳೆಯರು ಮಲ್ಯ ಕುರಿತಂತೆ ಬೈಗುಳಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಶೋಷಣೆ ಎಂಬುದು ನಿಮ್ಮ ರಕ್ತದಲ್ಲಿಯೇ ಇದೆ. ಹಿಂದೆ ಒಂದು ಸಮಯದಲ್ಲಿ ನಾನು ಬ್ಯಾಂಕುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇನೆಯೇ ವಿನಃ ಉದ್ಯೋಗಿಗಳೊಂದಿಗಲ್ಲ ಎಂದು ಹೇಳಿದ್ದರು. ಹೌದು ನಾನು ನಮ್ಮ ವ್ಯವಸ್ಥೆಯಿಂದಾಗಿ ದುರ್ಬಲರಾಗಿದ್ದೇವೆ. ಇಂದು ಮಹಿಳೆ ದಿನಾಚರಣೆ. ಆದರೂ ನಾವು ನೋವಿನಲ್ಲಿದ್ದೇವೆ. ಇದಕ್ಕೆ ಕಾರಣ ನಮ್ಮ ಸಹೋದ್ಯೋಗಿಯ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈವರೆಗೂ ಅವರ ಸಾವಿಗೆ ನ್ಯಾಯ ದೊರೆಯಲಿಲ್ಲ. ಪೊಲೀಸರು ನಿಮ್ಮ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲೇ ಇಲ್ಲ ಎಂದು ಹೇಳಿದ್ದಾರೆ.

ಪ್ರತೀಬಾರಿ ಏನೇ ಆದರೂ ಅದರಿಂತ ತಪ್ಪಿಸಿಕೊಳ್ಳುವ (ಚೇತರಿಸಿಕೊಳ್ಳುವ) ನೀವು ಕಣ್ಮರೆಯಾಗುವುದರಲ್ಲಿ ಅರ್ಥವೇನಿದೆ? ನಮ್ಮ ಶಾಪದ ಪರಿಣಾಮವನ್ನು ಇಂದು ನೀವು ಸಂಕಷ್ಟದಲ್ಲಿದ್ದೀರಿ, ಅವಮಾನವನ್ನು ಅನುಭವಿಸುತ್ತಿದ್ದೀರಿ. ಕೆಎಫ್ ಎ ಮಹಿಳಾ ಉದ್ಯೋಗಿಗಳು ಹಾಗೂ ಸಂಸ್ಥೆಗೆ ಅಷ್ಟೇ ಇಡೀ ಉದ್ಯಮಕ್ಕೆ ಕಳಂಕ ತಂದಿದ್ದೀರಿ. ರಾಜ್ಯಸಭೆ ಸಂಸದನಾಗಿಯೂ ದೇಶಕ್ಕೆ ಕಳಂಕ ತಂದಿದ್ದೀರಿ.

ನಿಮ್ಮಂತಹ ಕಾರ್ಪೊರೇಟ್ ಸಂಸ್ಥೆಗಳ ಒಡೆಯರು ಸಾರ್ವಜನಿಕ ಬ್ಯಾಂಕುಗಳನ್ನು ಲೂಟಿ ಮಾಡಿ, ಮೆರೆಯುತ್ತಿದ್ದೀರಿ. ನಾಚಿಯಾಗಬೇಕು ನಿಮಗೆ. ಮಹಿಳೆಯರ ಬಗ್ಗೆ ನಿಮಗೆ ನಿಜಕ್ಕೂ ಗೌರವವಿದೆಯಾ? ಇಂದು ಮಹಿಳೆಯರನ್ನು ನೀವು ಸರಕು/ಐಭೋಗದ ವಸ್ತುಗಳಂತೆ ನೋಡುತ್ತಿದ್ದೀರಿ. ಅವರಿಗೆ ಸಲ್ಲಬೇಕಾದ ಗೌರವವನ್ನು ನೀಡುತ್ತಿಲ್ಲ  ನೀವು ಏರ್ ಡೆಕ್ಕನ್ ಅಲ್ಲ ನಮಗೆ ಅನ್ನ ನೀಡುತ್ತಿದ್ದ ಕಿಂಗ್ ಫಿಷರ್ ಏರ್ ಲೈನ್ಸ್'ನ್ನು ಸಾಯಿಸಿದ್ದೀರಿ ಎಂದು ಹೇಳಿದ್ದಾರೆ.

ಈ ಪ್ರಕರಣವನ್ನು ನಾವು ಸುಮ್ಮನೆ ಬಿಡುವುದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ತರುತ್ತೇವೆ. ರಾಜ್ಯಸಭೆ ಸಮಿತಿಯಿಂದ ನಿಮ್ಮನ್ನು ಕಿತ್ತೊಗೆಯುವಂತೆ ತಿಳಿಸುತ್ತೇವೆ. ನೀವು ನಮ್ಮನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದಿರಿ. ಆದರೆ, ನೀವು ನಿಮಗೆ ಮಾಡಿಕೊಂಡ ಹಾಗೂ ನಿಮ್ಮ ಸಾಮ್ರಾಜ್ಯದ ಮೇಲೆ ಮಾಡಿಕೊಂಡ ಗಾಯದ ಮೇಲೆ ನಮಗೆ ಅನುಕಂಪವಿದೆ. ನಿಮಗೆ ಅಮಮಾನ ಮಾಡಿ ನಾವು ಸಂತೋಷ ಪಡುವುದಿಲ್ಲ. ನೀವು ನಮ್ಮ ಕತ್ತಲಲ್ಲಿ ಇಟ್ಟಿದ್ದಕ್ಕೆ ಉತ್ತರ ಬೇಕಿದೆ. ನಮ್ಮ ಸಂಕಷ್ಟಗಳಿಗೆ ನೀವು ಶೀಘ್ರಗತಿಯಲ್ಲಿ ಸ್ಪಂದನೆ ನೀಡುತ್ತಿದ್ದಿರಿ. ಆದರೆ, ಅದನ್ನೇ ಕಾನೂನು ಅಸ್ತ್ರವಾಗಿ ಬಳಸಿಕೊಂಡು ನಮ್ಮನ್ನು ಬಳಸಿಕೊಳ್ಳುತ್ತಿದ್ದಿರಿ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com