
ವಾಷಿಂಗ್ ಟನ್: ಅಸಾಧಾರಣ ನೆನಪಿನ ಶಕ್ತಿ, ಗಣಿತದ ಜ್ಞಾನ ಹೊಂದಿರುವ ಭಾರತೀಯ ಅಮೆರಿಕನ್ ಬಾಲಕ, ಅಮೆರಿಕಾದ ಬಾಲಕರೊಂದಿಗೆ ಚೈಲ್ಡ್ ಜೀನಿಯಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾನೆ.
ಲೈಫ್ ಟೈಮ್ ಟೆಲಿವಿಶನ್ ನ ಈ ಸ್ಪರ್ಧೆಯ ಫೈನಲ್ ನಲ್ಲಿ ಭಾಗವಹಿಸುತ್ತಿರುವ 9 ವರ್ಷದ ಭಾರತೀಯ ಅಮೆರಿಕನ್ ಬಾಲಕ ಅರ್ನವ್ ಕೃಷ್ಣ ಇಬ್ಬರು ಸ್ಪರ್ಧಾಳುಗಳನ್ನು ಎದುರಿಸಲಿದ್ದಾನೆ. ಈ ಸ್ಪರ್ಧೆಯಲ್ಲಿ ಗೆದ್ದ ಬಾಲಕನಿಗೆ 100,000 ಡಾಲರ್ ಬಹುಮಾನ ನೀಡಲಾಗುತ್ತದೆ ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.
ಸ್ಪರ್ಧೆಯ ವಿಜೇತರನ್ನು ಗುರುವಾರ ಮಾ.10 ರ ರಾತ್ರಿ ಘೋಷಣೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಅರ್ನವ್ ಕೃಷ್ಣ ತಾಯಿ ಸೀಮಾ ಕೃಷ್ಣ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ವಿಜಯ್ ಕೃಷ್ಣ ಆರ್ಥಿಕ ಸೇವಾ ಎಕ್ಸಿಕ್ಯೂಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರ್ನವ್ ಕೃಷ್ಣ ವಾಸ್ತುಶಿಲ್ಪಿ ಅಥವಾ ಗಣಿತಜ್ಞನಾಗಬೇಕೆಂಬ ಕನಸು ಹೊತ್ತಿದ್ದಾನೆ ಎಂದು ಸ್ಪರ್ಧೆಯನ್ನು ಆಯೋಜಿಸಿರುವ ಲೈಫ್ ಟೈಮ್ ಟೆಲಿವಿಶನ್ ಹೇಳಿದೆ.
Advertisement