
ಕಾನ್ಪುರ: ಬಡಗಿಯೋರ್ವ 3 ವರ್ಷದಿಂದ ಶ್ರಮವಹಿಸಿ ಕೆತ್ತನೆ ಮಾಡಿದ್ದ ಭಗವದ್ಗೀತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಸಂದೀಪ್ ಸೋನಿ (32) ಉಡುಗೊರೆ ಕೊಟ್ಟ ವ್ಯಕ್ತಿಯಾಗಿದ್ದು, ಈತ ಕಳೆದ 3 ವರ್ಷಗಳಿಂದ ಶ್ರಮವಹಿಸಿ ಮರದಲ್ಲೇ ಭಗವದ್ಗೀತೆಯ 18 ಅಧ್ಯಾಯ ಮತ್ತು 706 ಶ್ಲೋಕಗಳನ್ನು ಕೆತ್ತನೆ ಮಾಡಿದ್ದ. ಮರದಲ್ಲಿ ಕೆತ್ತನೆ ಮಾಡಿದ್ದ ಈ ಉಡುಗೊರೆಯನ್ನು ಮೋದಿಯವರಿಗೆ ನೀಡಲು ಹಲವು ಬಾರಿ ಯತ್ನಿಸಿದ್ದಾನೆ. ಆದರೆ ಇದು ಸಾಧ್ಯವಾಗಿರಲಿಲ್ಲ.
ಈ ಬಗ್ಗೆ ಮಾಹಿತಿ ತಿಳಿದ ಪ್ರಧಾನಿಯವರ ಸಚಿವಾಲಯವು ನಂತರ ಮೋದಿಯವರನ್ನು ಭೇಟಿ ಮಾಡುವಂತೆ ಆಹ್ವಾನ ನೀಡಿದೆ. ಇದರಂತೆ ಸೋನಿ ತನ್ನ ತಾಯಿ ಹಾಗೂ ಸ್ನೇಹಿತನೊಂದಿಗೆ ಮೋದಿಯವರನ್ನು ಭೇಟಿ ಮಾಡಿ ಉಡುಗೊರೆಯನ್ನು ನೀಡಿದ್ದಾನೆ.
ಉಡುಗೊರೆ ತೆಗೆದುಕೊಂಡ ಬಳಿಕ ಸೋನಿಗೆ ಸಲಹೆ ನೀಡಿರು ಮೋದಿಯವರು, ಮೇಕ್ ಇನ್ ಇಂಡಿಯಾ ಯೋಜನೆಯಡಿ ಈ ಉದ್ದಿಮೆಯನ್ನು ಪ್ರಾರಂಭಿಸುವಂತೆ ತಿಳಿಸಿದ್ದಾರೆ. ಅಲ್ಲದೆ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಇದರಂತೆ ಉಡುಗೊರೆ ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಮೋದಿಯವರು, ಮರದಲ್ಲಿ ಕೆತ್ತಿರುವ ಭಗವದ್ಗೀತೆ ಸುಂದರವಾದ ಕಲಾಕೃತಿಯಾಗಿದೆ ಎಂದು ಹೊಗಳಿದ್ದಾರೆ.
Advertisement