ಪಂದ್ಯಕ್ಕೆ ಭದ್ರತೆಯ ಬೇಡಿಕೆ ಇಟ್ಟಿರುವ ಪಾಕಿಸ್ತಾನಕ್ಕೆ ತಾವು ಮಾಡಿದ್ದು ಈಗ ತಮಗೇ ಮುಳುವಾಗಿದೆ ಎಂಬುದು ಅರ್ಥವಾದಂತಿದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ಬೆಳೆಸದೆ ಇದ್ದಿದ್ದರೆ ಇಂದು ಭದ್ರತೆಗೆ ಬೇಡಿಕೆ ಇಡುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆದರೆ ಈಗ ಅಂತಹ ಸ್ಥಿತಿ ಇಲ್ಲ, ಭಯೋತ್ಪಾದನೆ ಜನರ ಮನಸ್ಥಿತಿಯನ್ನು ಬದಲಾವಣೆ ಮಾಡಿದೆ ಎಂದು ಫಾರೂಕ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.