ದ್ವಿಪಕ್ಷೀಯ ಸಂಬಂಧದ ಕುರಿತು ಭಾರತ-ಮೆಕ್ಸಿಕೋ ಪುನರಾವಲೋಕನ
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮೆಕ್ಸಿಕೋ ವಿದೇಶಾಂಗ ಸಚಿವೆ ಕ್ಲಾಡಿಯಾ ರುಯಿಜ್ ಭೇಟಿ ಮಾಡಿದ್ದು ದ್ವಿಪಕ್ಷೀಯ ಸಂಬಂಧದ ಬಗ್ಗೆ ಪುನರಾವಲೋಕನ ನಡೆಸಿದ್ದಾರೆ.
ರಾಜಕೀಯ, ವಾಣಿಜ್ಯ, ವ್ಯಾಪಾರ, ಹಣಕಾಸು, ತಂತ್ರಜ್ಞಾನಕ್ಕೆ ಹಾಗೂ ಇನ್ನೂ ಅನೇಕ ವಿಷಯಗಳ ಬಗ್ಗೆ ಭಾರತ-ಮೆಕ್ಸಿಕೋ ನಡುವಿನ ದ್ವಿಪಕ್ಷೀಯ ಸಂಬಂಧದ ಸ್ಥಿತಿ ಬಗ್ಗೆ ಉಭಯ ನಾಯಕರೂ ಚರ್ಚೆ ನಡೆಸಿದ್ದಾರೆ. ದ್ವಿಪಕ್ಷೀಯ ಸಂಬಂಧದಲ್ಲಿ ಪ್ರಗತಿಯಾಗಿರುವುದಕ್ಕೆ ಸುಷ್ಮಾ ಸ್ವರಾಜ್ ಹಾಗೂ ಕ್ಲಾಡಿಯಾ ರುಯಿಜ್ ಸಂತಸ ವ್ಯಕ್ತಪಡಿಸಿದ್ದು, ಶೀಘ್ರವೇ ತಮ್ಮ ಉನ್ನತಮಟ್ಟದ ನಾಯಕರು ಪರಸ್ಪರ ಭೇಟಿ ಮಾಡುವುದಕ್ಕೆ ವಿದೇಶಾಂಗ ಸಚಿವರುಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಮಾ.11 ರಂದು ಭಾರತಕ್ಕೆ ಆಗಮಿಸಿದ್ದ ಮೆಕ್ಸಿಕೋ ವಿದೇಶಾಂಗ ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ನಂತರ ಸಿಐಐ(ಭಾರತೀಯ ಕೈಗಾರಿಕಾ ಒಕ್ಕೂಟ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಯಮಿಗಳೊಂದಿಗೆ ಮಾತನಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ