ಹುಲಿ ರಕ್ಷಣೆಗೆ ಭಾರತ-ನೇಪಾಳ ಜಂಟಿ ಕಾರ್ಯತಂತ್ರ

ಹುಲಿ ಸಂರಕ್ಷಣೆ ಕುರಿತು ಜಂಟಿ ಕಾರ್ಯತಂತ್ರ ರೂಪಿಸಲು ಭಾರತ- ನೇಪಾಳ ಅಧಿಕಾರಿಗಳು ಮಾ.14 ರಂದು ಸಭೆ ನಡೆಸಲಿದ್ದಾರೆ.
ಹುಲಿ ರಕ್ಷಣೆಗೆ ಭಾರತ-ನೇಪಾಳ ಜಂಟಿ ಕಾರ್ಯತಂತ್ರ
ಹುಲಿ ರಕ್ಷಣೆಗೆ ಭಾರತ-ನೇಪಾಳ ಜಂಟಿ ಕಾರ್ಯತಂತ್ರ

ನವದೆಹಲಿ: ಹುಲಿ ಸಂರಕ್ಷಣೆ ಕುರಿತು ಜಂಟಿ ಕಾರ್ಯತಂತ್ರ ರೂಪಿಸಲು ಭಾರತ- ನೇಪಾಳ ಅಧಿಕಾರಿಗಳು ಮಾ.14 ರಂದು ಸಭೆ ನಡೆಸಲಿದ್ದಾರೆ.

ನೇಪಾಳ ಗಡಿ ಪ್ರದೇಶದಲ್ಲಿ ಕಳೆದ ವರ್ಷ 14 ಹುಲಿಗಳನ್ನು ಬೇಟೆಯಾಡಲಾಗಿದ್ದು, ಹುಲಿ ಸಂತತಿ ಕ್ಷೀಣಿಸದಂತೆ ಎಚ್ಚರ ವಹಿಸುವ ಬಗ್ಗೆ ಭಾರತ-ನೇಪಾಳದ ಹಿರಿಯ ಅರಣ್ಯ ಅಧಿಕಾರಿಗಳು ಸಭೆಯಲ್ಲಿ ಚರ್ಚಿಸಲಿದ್ದಾರೆ. ಎರಡು ದಿನಗಳ ಕಾಲ ಈ ಸಭೆ ನಡೆಯಲಿದ್ದು, ಹುಲಿ ಬೇಟೆ ತಡೆಗೆ ಜಂಟಿ ಕಾರ್ಯತಂತ್ರ ರೂಪಿಸುವುದು ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ನೇಪಾಳ ನಿಯೋಗದ ಮುಖ್ಯಸ್ಥ ಅಖಿಲೇಶ್ವರ್ ಕರ್ಣ ಹೇಳಿದ್ದಾರೆ.

ಜನವರಿ 2015 -ಫೆ.2016 ರ ವರೆಗೆ ಗಡಿ  ಪ್ರದೇಶದಲ್ಲಿ 14 ಹುಲಿಗಳನ್ನು ಕೊಲ್ಲಲಾಗಿದೆ. ಇದರಿಂದಾಗಿ 2020 ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಯೋಜನೆಗೆ ಅಡ್ಡಿ ಉಂಟಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com