
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಸಂಸ್ಕೃತಿ ವಿಶ್ವ ಉತ್ಸವವನ್ನು ನಡೆಸುವಂತೆ ದೆಹಲಿ ಸರ್ಕಾರದ ಸಂಸ್ಕೃತಿ ಖಾತೆ ಸಚಿವ ಕಪಿಲ್ ಮಿಶ್ರಾ ಆರ್ಟ್ ಆಫ್ ಲಿವಿಂಗ್ ಸ್ಥಾಪಕ ರವಿಶಂಕರ ಗುರೂಜಿಯವರನ್ನು ಕೋರಿದ್ದಾರೆ.
ದೆಹಲಿಯಲ್ಲಿ ಇಂತಹದ್ದೇ ಮತ್ತೊಂದು ಸಂಸ್ಕೃತಿ ಉತ್ಸವವನ್ನು ಆಯೋಜಿಸೋಣ, ನಮಗೆ ಕಾರ್ಯಕ್ರಮದ ಆತಿಥೇಯ ವಹಿಸಲು ಬಹಳ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ಯಮುನಾ ನದಿ ನೀರನ್ನು ಸ್ವಚ್ಛಗೊಳಿಸುವುದಾಗಿ ನಾವು ನಿರ್ಣಯ ತೆಗೆದುಕೊಳ್ಳೋಣ ಎಂದು ನಿನ್ನೆ ಮುಕ್ತಾಯಗೊಂಡ ಆರ್ಟ್ ಆಫ್ ಲಿವಿಂಗ್ ನ ವಿಶ್ವ ಸಂಸ್ಕೃತಿ ಉತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಹೇಳಿದರು.
ಸೂರ್ಯ ಒಂದು ಕಡೆಯಲ್ಲಿ ಮುಳುಗಿದ್ದಾನೆ, ಇನ್ನೊಂದು ಕಡೆಯಲ್ಲಿ ಉದಯವಾಗಬೇಕು. ಇಂದು ಈ ಕಾರ್ಯಕ್ರಮ ನಡೆದ ಸ್ಥಳವನ್ನು ಬಿಟ್ಟು ಹೋಗುವಾಗ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಪಣತೊಟ್ಟು ಹೋಗೋಣ ಎಂದರು.
ಇದೇ ಸಂದರ್ಭದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮಾನಸಿಕ ಒತ್ತಡದಿಂದ ಮುಕ್ತರಾಗಿ ಮನರಂಜನೆ ಸಿಗುವ ಮೊಬೈಲ್ ಗೇಮನ್ನು ಬಿಡುಗಡೆ ಮಾಡಿತು.
Advertisement