ಪವಾಡ! ಕಬ್ಬಿಣದ ಸರಳು ಕುತ್ತಿಗೆಗೆ ಚುಚ್ಚಿಕೊಂಡರು ಬದುಕುಳಿದ ಕಾರ್ಮಿಕ

ಕಟ್ಟಡ ಕಾಮಗಾರಿ ವೇಳೆ ಆಯಾ ತಪ್ಪಿ ಕಟ್ಟಡದ ಎರಡನೇ ಅಂತಸ್ಥಿನಿಂದ ಕೆಳಗೆ ಬಿದ್ದು ಕುತ್ತಿಗೆಗೆ ಕಬ್ಬಿಣದ ಸರಳು ಚುಚ್ಚಿಕೊಂಡರು ಬದುಕುಳಿದ ಪವಾಡ ಸದೃಶ್ಯ ಘಟನೆ ಕೇರಳದಲ್ಲಿ...
ವಿಫ್ಲವ್ ಬುರ್ಮನ್
ವಿಫ್ಲವ್ ಬುರ್ಮನ್

ಕಟ್ಟಡ ಕಾಮಗಾರಿ ವೇಳೆ ಆಯಾ ತಪ್ಪಿ ಕಟ್ಟಡದ ಎರಡನೇ ಅಂತಸ್ಥಿನಿಂದ ಕೆಳಗೆ ಬಿದ್ದು ಕುತ್ತಿಗೆಗೆ ಕಬ್ಬಿಣದ ಸರಳು ಚುಚ್ಚಿಕೊಂಡರು ಬದುಕುಳಿದ ಪವಾಡ ಸದೃಶ್ಯ ಘಟನೆ ಕೇರಳದಲ್ಲಿ ನಡೆದಿದೆ.

ಬಿಹಾರ ಮೂಲದ 28 ವರ್ಷದ ವಿಫ್ಲವ್ ಬುರ್ಮನ್ ಕಳೆದ ಶುಕ್ರವಾರ ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಗ್ರಾಮದಲ್ಲಿ ಬೆಳಗ್ಗೆ 9.30ರ ಸುಮಾರಿನಲ್ಲಿ ಕಟ್ಟಡದ ಎರಡನೇ ಅಂತಸ್ಥಿನಿಂದ ಕಳಗೆ ಬಿದ್ದಿದ್ದಾನೆ. ಈ ವೇಳೆ ಕಬ್ಬಿಣದ ಸರಳೊಂದು ಆತನ ಕುತ್ತಿಗೆಗೆ ಚುಚ್ಚಿಕೊಂಡಿದೆ. ಸರಳು ಮುಂದಿನ ಕುತ್ತಿಗೆಗೆ ಚುಚ್ಚಿಕೊಂಡು ಹಿಂಬದಿಗೆ ಬಂದಿದ್ದರು. ಕಾರ್ಮಿಕ ವಿಫ್ಲವ್ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.

ಕಬ್ಬಿಣದ ಸರಳು ಗ್ವಾಮಾಳೆ ಪಕ್ಕದಲ್ಲಿ ಚುಚ್ಚಿಕೊಂಡಿರುವುದರಿಂದ ವಿಪ್ಲವ್ ಗೆ ಪ್ರಾಣಾಪಾಯ ಸಂಭವಿಸಿಲ್ಲ. ಆತ ಕಟ್ಟಡದಿಂದ ಕೆಳಗೆ ಬಿದ್ದ ಕೂಡಲೇ ಆತನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಜೆ ಆಸ್ಪತ್ರೆಯ ವೈದ್ಯರು ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ ವಿಪ್ಲವ್ ಕುತ್ತಿಗೆಯಿಂದ ಸರಳನ್ನು ತೆಗೆದಿದ್ದಾರೆ. ಸದ್ಯ ವಿಪ್ಲಲ್ ಆರೋಗ್ಯ ಸ್ಥಿತಿ ಚೇತರಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com