
ಮೊರಾದಾಬಾದ್: ಸಂಸದ ವರುಣ್ ಗಾಂಧಿ ಹೇರಿದ್ದ ವೇದಿಕೆ ಕುಸಿದ ಘಟನೆ ಉತ್ತರ ಪ್ರದೇಶದ ಚ್ಚಾಜ್ಲೆಟ್ ನಲ್ಲಿ ನಡೆದಿದೆ. ಬಿಜೆಪಿ ಆಯೋಜಿಸಿದ್ದ ಸಮಾರಂಭದ ವೇದಿಕೆ ಕುಸಿದಿದ್ದು, ಸುಲ್ತಾನಪುರ ಕ್ಷೇತ್ರದ ಸಂಸದ ವರುಣ್ ಗಾಂಧಿ ಅಪಾಯದಿಂದ ಪಾರಾಗಿದ್ದಾರೆ. ವೇದಿಕೆಯಲ್ಲಿ ಗಾಂಧಿ ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದರಿಂದ ವೇದಿಕೆ ಕುಸಿದಿದೆ.
ರೈತರೊಂದಿಗೆ ಸಂವಾದ ನಡೆಸಲು ವರುಣ್ ಅವರು ಚ್ಚಾಜ್ಲೆಟ್‌ಗೆ ಹೊರಟಿದ್ದರು. ಇವರನ್ನು ಸ್ವಾಗತಿಸಲು ಮೊರಾದಾಬಾದ್– ಹರಿದ್ವಾರ ರಾಷ್ಟ್ರೀಯ ಹೆದ್ದಾರಿ ಸಮೀಪದ ಪೀಲಿ ಕೋಠಿ ಚೌಕ್‌ನಲ್ಲಿ ಸ್ಥಳೀಯ ಸಂಸದ ಸರ್ವೇಶ್ ಕುಮಾರ್ ಸಮಾರಂಭ ಆಯೋಜಿಸಿದ್ದರು. ಇದಕ್ಕಾಗಿ ನಿರ್ಮಿಸಿದ್ದ ತಾತ್ಕಾಲಿಕ ವೇದಿಕೆಯಲ್ಲಿ ಹೆಚ್ಚಿನ ಜನರು ಸೇರಿದ್ದರಿಂದ ವೇದಿಕೆ ಕುಸಿದಿದೆ. ವೇದಿಕೆಯಲ್ಲಿ ವರುಣ್ ಜೊತೆಗೆ ಸರ್ವೇಶ್ ಕುಮಾರ, ಮೇಯರ್ ವೀಣಾ ಅಗರವಾಲ್ ಇದ್ದರು. ಯಾರಿಗೂ ಯಾವುದೇ ಗಾಯವಾಗಿಲ್ಲ.
ಸಾಲದ ಬಾಧೆಯಿಂದ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಮೂವರು ರೈತರ ಕುಟುಂಬದವರೊಂದಿಗೆ ನನ್ನ 36ನೇ ಜನ್ಮ ದಿನವನ್ನು ಕಳೆಯಲು ತೆರಳಿದ್ದೆ. ರೈತರ ಮೂರು ಕುಟುಂಬಗಳಿಗೆ ತಲಾ 1 ಲಕ್ಷ ಸಹಾಯಧನವನ್ನು ನನ್ನ ಸಂಬಳದಿಂದ ನೀಡಿದ್ದೇನೆ’ ಎಂದು ಘಟನೆ ನಂತರ ವರುಣ್ ಅವರು ತಿಳಿಸಿದ್ದಾರೆ
Advertisement