ನವದೆಹಲಿ: ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಅನಿರ್ಬನ್ ಬಿಡುಗಡೆಗೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಕನ್ಹಯ್ಯಾ ಮೇಲೆ ನಾಲ್ವರು ದಾಳಿ ನಡೆಸಲು ಯತ್ನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಬಳಿ ಕನ್ಹಯ್ಯಾ ಕುಮಾರ್ ಉಮರ್ ಖಾಲೀದ್ ಮತ್ತು ಅನಿರ್ಬನ್ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಾಲ್ವರು ಕನ್ಹಯ್ಯಾ ಕುಮಾರ್ ಅವರನ್ನು ನಿಂದಿಸಿದ್ದಾರೆ. ಅದರಲ್ಲಿ ಒಬ್ಬ ಕನ್ಹಯ್ಯಾ ನಿಂತಿದ್ದ ಟೆಂಪೋ ಹತ್ತಿ ದಾಳಿ ನಡೆಸಲು ಯತ್ನಿಸಿದ್ದಾನೆ. ಕೂಡಲೇ ಆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ನಾಲ್ವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ ಓರ್ವ ಕ್ಷೌರಿಕ, ಒಬ್ಬ ಹೋಟೆಲ್ ವ್ಯವಸ್ಥಾಪಕ, ಮತ್ತೊಬ್ಬ ಕಾರ್ ಡೀಲರ್, ಇನ್ನೊಬ್ಬ ಇನ್ಸುರೆನ್ಸ್ ಏಜೆಂಟ್ ಎಂದು ಪೊಲೀಸರು ತಿಳಿಸಿದ್ದಾರೆ.