ಓವೈಸಿ ನಾಲಿಗೆ ಕತ್ತರಿಸಿದವರಿಗೆ 1 ಕೋಟಿ ರೂ. ಬಹುಮಾನ: ಶ್ಯಾಮ್ ಪ್ರಕಾಶ್ ದ್ವಿವೇದಿ

ಭಾರತ್ ಮಾತಾ ಕಿ ಜೈ' ಎಂದು ಕೂಗುವುದಿಲ್ಲ ಎಂದಿದ್ದ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿಯನ್ನು ಹಿಂದೂ ಸೇನೆ ದೇಶದ್ರೋಹಿ...
ಎಐಎಂಐಎಂ ನಾಯಕ ಅಸದುದ್ದೀನ್ ಓವೈಸಿ
ಎಐಎಂಐಎಂ ನಾಯಕ ಅಸದುದ್ದೀನ್ ಓವೈಸಿ

ಲಖನೌ: 'ಭಾರತ್ ಮಾತಾ ಕಿ ಜೈ' ಎಂದು ಕೂಗುವುದಿಲ್ಲ ಎಂದಿದ್ದ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿಯನ್ನು ಹಿಂದೂ ಸೇನೆ ದೇಶದ್ರೋಹಿ ಎಂದು ಬಿಂಬಿಸಿದ ನಂತರ, ಇದೀಗ ಓವೈಸಿಯ ನಾಲಿಗೆ ಕತ್ತರಿಸಿದವರಿಗೆ 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಬಿಜೆಪಿ ನಾಯಕ ಶ್ಯಾಮ್ ಪ್ರಕಾಶ್ ದ್ವಿವೇದಿ ಘೋಷಿಸಿದ್ದಾರೆ.

ಓವೈಸಿಗೆ ಭಾರತದಲ್ಲಿ ಇರಲು ಯಾವುದೇ ಹಕ್ಕು ಇಲ್ಲ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಲಖನೌನ ವಿದ್ಯಾರ್ಥಿಯೊಬ್ಬ ಓವೈಸಿಯ ನಾಲಿಗೆ ಕತ್ತರಿಸಿದವರಿಗೆ 21 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದ.

'' ಓವೈಸಿಯು ದೇಶದ್ರೋಹಿ ಎಂದು ನಾನು ಭಾವಿಸುತ್ತೇನೆ. ಭಾರತ ಮಾತಾ ಕಿ ಜೈ ಎಂದು ಹೇಳುವುದಿಲ್ಲವೆಂದಾದರೆ ಆತನಿಗೆ ಭಾರತದಲ್ಲಿ ಉಳಿಯಲು ಹಕ್ಕು ಇಲ್ಲ. ಅವನ ನಾಲಿಗೆಯನ್ನು ಕತ್ತರಿಸಿ ಹಾಕಬೇಕು. ಯಾರಾದರೂ ಈ ಕೆಲಸ ಮಾಡಿದರೆ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ದ್ವಿವೇದಿ ಘೋಷಿಸಿದ್ದಾರೆ.

ಈ ಹಿಂದೆ ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿ ಆರ್ ಎಸ್ಎಸ್ ಸಭೆಯಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಜೆಎನ್ ಯು ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳು ಕೇಳಿಬಂದಿವೆ. ಪ್ರತಿಯೊಬ್ಬರೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗವಂತಾಗಬೇಕು. ಯುವಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಇದು ಪೂರಕವಾಗಬೇಕೆಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಹೈದರಾಬಾದ್ ನ ಸಂಸದ ಓವೈಸಿ, ನನ್ನ ಕುತ್ತಿಗೆ ಮೇಲೆ ಚೂರಿ ಇಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ. ಘೋಷಣೆಯನ್ನು ಕೂಗಿ, ದೇಶಭಕ್ತಿ ಸಾಬೀತುಪಡಿಸಬೇಕೆಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಹಾಗಾಗಿ ಕಾನೂನು ಉಲ್ಲಂಘನೆಯ ಪ್ರಶ್ನೆ ಇಲ್ಲಿ ಹುಟ್ಟುವುದಿಲ್ಲ. ಈ ನಿಲುವಿಗೆ ನಾನು ಬದ್ಧನಾಗಿದ್ದೇನೆ ಯಾವುದೇ ಕಾರಣಕ್ಕೂ ಘೋಷಣೆ ಕೂಗುವುದಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com