
ಹೈದರಾಬಾದ್: ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಯಾವುದೇ ಕಾರಣಕ್ಕೂ ನಾನು ಭಾರತ್ ಮಾತಾ ಕೀ ಜೈ ಎಂದು ಕರೆಯುವುದಿಲ್ಲ ಎಂಬ ಹೇಳಿಕೆ ಇದೀಗ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಮಧ್ಯೆ ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಇಸ್ಲಾಂ ಧರ್ಮದ ನಂಬಿಕೆಗಳಿಗೆ ವಿರುದ್ಧವಾದದ್ದು ಎಂದು ಹೇಳಿ ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿರುವ ಪ್ರಭಾವಿ ಇಸ್ಲಾಮಿಕ್ ಸೆಮಿನರಿ ಜಾಮಿಯಾ ನಿಜಾಮಿಯಾ ವಿರುದ್ಧ ಫತ್ವಾ ಹೊರಡಿಸಿದೆ.
ಜಾಮಿಯಾ ನಿಜಾಮಿಯಾದ ಮುಖಂಡ ಫತ್ವಾ ಸಯೀದ್ ಗುಲಾಂ ಸಂದಾನಿ ಅಲಿ ಖ್ವಾದ್ರಿ ಇಸ್ಲಾಂನ ನ್ಯಾಯ ಪಂಡಿತರು ಮತ್ತು ಧಾರ್ಮಿಕ ಮುಖಂಡರ ಜತೆ ಚರ್ಚಿಸಿದ ಬಳಿಕ ಈ ಘೋಷಣೆ ವಿರುದ್ಧ ಫತ್ವಾ ಪ್ರಕಟಿಸಿದ್ದಾರೆ.
ಮನುಷ್ಯರು ಮಾತ್ರ ಮನುಷ್ಯರಿಗೆ ಜನ್ಮ ನೀಡಲು ಸಾಧ್ಯ. ನೆಲವು ಜನ್ಮದಾತೆ ಆಗದು. ಇಸ್ಲಾಂ ಇದನ್ನೇ ಹೇಳುತ್ತದೆ. ಹೀಗಾಗಿ ಇದು ಇಸ್ಲಾಂ ನಂಬಿಕೆಗೆ ವಿರುದ್ಧ ಎಂದು ಫತ್ವಾದಲ್ಲಿ ವಿವರಿಸಲಾಗಿದೆ. ಹೀಗಿದ್ದರೂ ಭಾರತ ಭೂಮಿಯನ್ನು ತಾಯಿ ಎಂದು ಪೂಜಿಸುವುದು ವೈಯಕ್ತಿಕ ನಂಬಿಕೆ, ಅದನ್ನು ಇತರರ ಮೇಲೆ ಹೇರಬಾರದು ಎಂದು ಫತ್ವಾ ತಿಳಿಸಿದೆ.
Advertisement