
ನವದೆಹಲಿ: ಜಮ್ಮ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮತ್ತೆ ಭಾರೀ ಹಿಮಪಾತ ಸಂಭವಿಸಿದ್ದು, ಹಿಮಪಾತದಲ್ಲಿ ಓರ್ವ ಯೋಧ ಕಣ್ಮರೆಯಾಗಿರುವುದಾಗಿ ವರದಿಗಳು ತಿಳಿಸಿವೆ.
ಕೆಲವು ದಿನಗಳ ಹಿಂದಷ್ಟೇ ಸಿಯಾಚಿನ್ ಗಡಿಯಲ್ಲಿ ಭೀಕರ ಹಿಮಪಾತ ಸಂಭವಿಸಿತ್ತು. ಹಿಮಪಾತದಲ್ಲಿ ಕರ್ನಾಟಕ ಮೂಲದ ಹನುಮಂತಪ್ಪ ಸೇರಿ 10 ಮಂದಿ ಹುತಾತ್ಮರಾಗಿದ್ದರು.
ಇದೀಗ ಮತ್ತೆ ಇಂತಹದ್ದೇ ಘಟನೆ ಸಂಭವಿಸಿದ್ದು, ಹಿಮಪಾತದಲ್ಲಿ ಇಬ್ಬರು ಯೋಧರು ಕಣ್ಮರೆಯಾಗಿದ್ದರು. ಕಾರ್ಯಾಚರಣೆ ನಡೆಸಿದ್ದ ಸಿಬ್ಬಂದಿಗಳು ಓರ್ವ ಯೋಧನನ್ನು ಸಂರಕ್ಷಣೆ ಮಾಡಿದ್ದಾರೆ. ಇದೀಗ ಮತ್ತೊಬ್ಬ ಯೋಧನಿಗಾಗಿ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆಂದು ತಿಳಿದುಬಂದಿದೆ.
ಮಾರ್ಚ್ 17 ರಂದು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ 17,500 ಅಡಿ ಎತ್ತರದಲ್ಲಿ ಇಬ್ಬರು ಯೋಧರು ಗಡಿ ಕಾಯುತ್ತಿದ್ದರು ಈ ವೇಳೆ ಹಿಮಪಾತ ಸಂಭವಿಸಿದೆ. ಹಿಮಪಾತದಲ್ಲಿ ಇಬ್ಬರೂ ಯೋಧರು ಕಣ್ಮರೆಯಾಗಿದ್ದರು. ಇದೀಗ ಓರ್ವ ಯೋಧನನ್ನು ಸಂರಕ್ಷಣೆ ಮಾಡಲಾಗಿದ್ದು, ಮತ್ತೊಬ್ಬ ಯೋಧನಿಗಾಗಿ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement