ಇಸ್ತಾಂಬುಲ್'ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: 4 ಸಾವು, 36 ಗಾಯ

ಇಸ್ತಾಂಬುಲ್ ನ ಹೃದಯ ಭಾಗವೆಂದೇ ಹೇಳಲಾಗುವ ಮಾರುಕಟ್ಟೆ ಪ್ರದೇಶದ ಮೇಲೆ ಉಗ್ರರು ನಡೆಸಿದ್ದು, ಘಟನೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿ 36ಕ್ಕೂ ಹೆಚ್ಚು ಮಂದಿ...
ಇಸ್ತಾಂಬುಲ್'ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: 4 ಸಾವು, 36 ಗಾಯ (ಸಾಂದರ್ಭಿಕ ಚಿತ್ರ)
ಇಸ್ತಾಂಬುಲ್'ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: 4 ಸಾವು, 36 ಗಾಯ (ಸಾಂದರ್ಭಿಕ ಚಿತ್ರ)

ಇಸ್ತಾಂಬುಲ್: ಇಸ್ತಾಂಬುಲ್ ನ ಹೃದಯ ಭಾಗವೆಂದೇ ಹೇಳಲಾಗುವ ಮಾರುಕಟ್ಟೆ ಪ್ರದೇಶದ ಮೇಲೆ ಉಗ್ರರು ನಡೆಸಿದ್ದು, ಘಟನೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿ 36ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಇಸ್ತಾಂಬುಲ್ ನ ಇಸ್ತಿಕ್ ಲಾಲ್ ಕಡ್ಡೆಸಿ ರಸ್ತೆಯಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಈ ವರೆಗೂ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಕುರ್ದಿಷ್ ಬಂಡುಕೊರರು ದಾಳಿ ನಡೆಸಿರಬಹುದೆಂದು ಅನುಮಾನಗಳು ವ್ಯಕ್ತವಾಗುತ್ತಿವೆ ಎನ್ನಲಾಗಿದೆ.
ದಾಳಿಯನ್ನು ಇಸಿಸ್ ಉಗ್ರ ಸಂಘಟನೆಯ ಸದಸ್ಯರು ನಡೆಸಿರಬಹುದೆಂದು ಶಂಕೆಗಳು ವ್ಯಕ್ತವಾಗುತ್ತಿವನೆ. ಆದರೆ, ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಹೇಳಿದ್ದಾರೆ.

ಆತ್ಮಾಹುತಿ ಬಾಂಬರ್ ಗಳು ಹೆಚ್ಚು ಜನರಿರುವ ಪ್ರದೇಶದ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದರು. ಆದರೆ, ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದರಿಂದ ಅದು ಸಾಧ್ಯವಾಗಿರಿಲಿಲ್ಲ. ಹೀಗಾಗಿ ತಾವು ನಿಂತಿದ್ದ ಸ್ಥಳದಲ್ಲಿಯೇ ಬಾಂಬ್ ಸ್ಫೋಟಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಬಾಂಬ್ ಸ್ಫೋಟಿಸಿಕೊಂಡ ಉಗ್ರರು ಸಿರಿಯಾ ಗಡಿಯಲ್ಲಿ ದಕ್ಷಿಣದ ಗಾಜಿಯಾನ್ಟೆಪ್ ಮೂಲದವರಾಗಿದ್ದಾರೆಂದು ತಿಳಿದುಬಂದಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಅಂಕಾರಾದಲ್ಲಿಯೂ ಅತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಇದರಂತೆ ಕಳೆದ ಜುಲೈ ತಿಂಗಳ ಬಳಿಕ ಇದು 5ನೇ ಬಾಂಬ್ ದಾಳಿಯಾಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com