ಉತ್ತರಾಖಂಡ್ ಕಾಂಗ್ರೆಸ್ ನಲ್ಲಿ ಬಂಡಾಯ: ಪಕ್ಷದಿಂದ ಮಾಜಿ ಸಿಎಂ ಬಹುಗುಣ ಪುತ್ರನ ಉಚ್ಚಾಟನೆ

ಉತ್ತರಾಖಂಡ್ ಕಾಂಗ್ರೆಸ್ ನಲ್ಲಿ ಬಂಡಾಯ ತಾರಕಕ್ಕೇರಿದ್ದು, ಪಕ್ಷದ ವಿರುದ್ಧವೇ ತಿರುಗಿಬಿದ್ದಿರುವ ಒಂಬತ್ತು ಶಾಸಕರು ಸೋಮವಾರದಿಂದ...
ಮುಖ್ಯಮಂತ್ರಿ ಹರಿಶ್ ರಾವತ್
ಮುಖ್ಯಮಂತ್ರಿ ಹರಿಶ್ ರಾವತ್
Updated on: 
ನವದೆಹಲಿ: ಉತ್ತರಾಖಂಡ್ ಕಾಂಗ್ರೆಸ್ ನಲ್ಲಿ ಬಂಡಾಯ ತಾರಕಕ್ಕೇರಿದ್ದು, ಪಕ್ಷದ ವಿರುದ್ಧವೇ ತಿರುಗಿಬಿದ್ದಿರುವ ಒಂಬತ್ತು ಶಾಸಕರು ಸೋಮವಾರದಿಂದ ಭೂಗತರಾಗಿದ್ದು, ದೆಹಲಿಯ ಐಷಾರಾಮಿ ಹೋಟೆಲ್ ವೊಂದರಲ್ಲಿ ತಂಗಿದ್ದಾರೆ ಎನ್ನಲಾಗಿದೆ.
ಈ ಮಧ್ಯ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಹಾಗೂ ಶಾಸಕರ ಬಂಡಾಯಕ್ಕೆ ಕಾರಣವಾದ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರ ಪುತ್ರ ಸಾಕೇತ್ ಹಾಗೂ ಅನಿಲ್ ಗುಪ್ತ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.
ಇದಕ್ಕು ಮುನ್ನ ಕಾಂಗ್ರೆಸ್ ರಾಜ್ಯದ ಎಲ್ಲಾ ಒಂಬತ್ತು ಜಿಲ್ಲಾ ಘಟಕಗಳನ್ನು ವಿಸರ್ಜಿಸಿತ್ತು.
9 ಕಾಂಗ್ರೆಸ್ ಶಾಸಕರು ಬಂಡಾಯವೆದ್ದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದೀಗ 28ರೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. 
ಇನ್ನು 27 ಸದಸ್ಯ ಬಲವನ್ನು ಹೊಂದಿರುವ ಬಿಜೆಪಿ, ಸರ್ಕಾರ ರಚಿಸಲು ತಮಗೆ ಹಕ್ಕು ನೀಡಬೇಕೆಂದು ರಾಜ್ಯಪಾಲರ ಮೊರೆ ಹೋಗಿದೆ.
ಇಂದು ಸಂಜೆ ಬಿಜೆಪಿಯ 35 ನಾಯಕರು ಮತ್ತು ಬಂಡಾಯ ಕಾಂಗ್ರೆಸ್ ಶಾಸಕರು ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಮನವಿ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com