ರಾಷ್ಟ್ರೀಯತೆ ಬಗ್ಗೆ ಜೇಟ್ಲಿಯಿಂದ ತಿಳಿದುಕೊಳ್ಳುವ ಅಗತ್ಯವಿಲ್ಲ: ಯೆಚೂರಿ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಂದ ರಾಷ್ಟ್ರೀಯತೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರು ಹೇಳಿದ್ದಾರೆ...
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

ಕೋಲ್ಕತಾ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರಿಂದ ರಾಷ್ಟ್ರೀಯತೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರು ಹೇಳಿದ್ದಾರೆ.

ರಾಷ್ಚ್ರೀಯತೆ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯ ಮಾತುಗಳು ಒಂದು ರೀತಿಯಲ್ಲಿ ನೀವು ನಮ್ಮೊಂದಿಗಿರಬೇಕು ಇಲ್ಲವೇ ಭಯೋತ್ಪಾದಕರ ಜೊತೆಗಿರಬೇಕೆನ್ನುವ ಜಾರ್ಜ್ ಬುಷ್ ಪ್ರತಿಪಾದನೆಯಂತಿದೆ. ಬಿಜೆಪಿ ಪಕ್ಷಕ್ಕೆ ಯಾರು ಬೆಂಬಲ ನೀಡುತ್ತಾರೊ ಅವರು ರಾಷ್ಟ್ರೀಯವಾದಿಗಳು ಇಲ್ಲವೇ ಅವರು ರಾಷ್ಟ್ರವಿರೋಧಿಗಳೆಂದು ಬಣ್ಣಿಸಲಾಗುತ್ತಿದೆ. ನಮಗೆ ಬಿಜೆಪಿಯಿಂದ ರಾಷ್ಟ್ರೀಯತೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಹಿಂದಷ್ಚೇ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ್ದ ಜೇಟ್ಲಿಯವರು, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ರಾಷ್ಟ್ರೀಯತೆ ಎಂಬುದು ಎರಡೂ ಒಟ್ಟಿಗೆ ಸಾಗುವಂತಹದ್ದು. ಭಾರತ ಸಂವಿಧಾನದಲ್ಲಿ ಅಭಿವ್ಯಕ್ತಿಸುವ ಹಾಗೂ ಅಸಮ್ಮತಿ ವ್ಯಕ್ತಪಡಿಸುವ ಹಕ್ಕು ಇದೆ. ಆದರೆ, ನಾಶಕ್ಕೆ ಸ್ವಾತಂತ್ರ್ಯ ನೀಡುವುದಿಲ್ಲ, ರಾಷ್ಟ್ರೀಯ ಸಿದ್ಧಾಂತಗಳು ನಮ್ಮ ನಂಬಿಕೆ ಹಾಗೂ ತತ್ವಶಾಸ್ತ್ರಗಳನ್ನು ಮಾರ್ಗದರ್ಶಿಸುತ್ತದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com