ಶಶಿ ತರೂರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಭಾರತಕ್ಕೆ ಒಬ್ಬರೇ ಭಗತ್ ಸಿಂಗ್ ಇರುವುದು ಎಂದು ಹೇಳಿಕೆ ನೀಡಿ ಶಶಿತರೂರ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಜೆಎನ್ ಯು ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಶಿ ತರೂರ್, ಬ್ರಿಟೀಷ್ ರ ಆಡಳಿತದಲ್ಲಿ ಭಗತ್ ಸಿಂಗ್, ನೆಹರು, ಮಹಾತ್ಮಾ ಗಾಂಧಿ ಅವರ ವಿರುದ್ಧ ರಾಷ್ಟ್ರದ್ರೋಹದ ಆರೋಪ ಹೊರಿಸಿ ಜೈಲಿಗೆ ಕಳಿಸಿದ್ದರು. ಕನ್ಹಯ್ಯ ಕುಮಾರ್ ವಿರುದ್ಧವೂ ರಾಷ್ಟ್ರದ್ರೋಹದ ಆರೋಪ ಹೊರಿಸಲಾಗಿದ್ದು ಕನ್ಹಯ್ಯ ಈಗಿನ ಕಾಲದ ಭಗತ್ ಸಿಂಗ್ ಎಂಬ ಹೇಳಿಕೆ ನೀಡಿದ್ದರು.