ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಹೇಳಲು ಸಿಖ್ ಸಮುದಾಯದಲ್ಲಿ ಅವಕಾಶವಿಲ್ಲ

ಸಿಖ್ ಸಮುದಾಯದವರು ಮಹಿಳೆಯರನ್ನು ಯಾವುದೇ ರೂಪದಲ್ಲಿ ಆರಾಧಿಸುವುದಿಲ್ಲ. ಆದ್ದರಿಂದ ನಾವು ಭಾರತ್ ಮಾತಾ ಕೀ ಜೈ ಎಂದ ಕೂಗುವುದಿಲ್ಲ ಎಂದು...
ಸಿಮ್ರಂಜಿತ್ ಸಿಂಗ್ ಮನ್
ಸಿಮ್ರಂಜಿತ್ ಸಿಂಗ್ ಮನ್
ಚಂಡೀಗಢ:  ದೇಶದಲ್ಲಿ ದೇಶಭಕ್ತಿ, ರಾಷ್ಟ್ರಗೀತೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಸಿಖ್ ಸಮುದಾಯದವರು ಮಹಿಳೆಯರನ್ನು ಯಾವುದೇ ರೂಪದಲ್ಲಿ ಆರಾಧಿಸುವುದಿಲ್ಲ. ಆದ್ದರಿಂದ ನಾವು ಭಾರತ್ ಮಾತಾ ಕೀ ಜೈ ಎಂದ ಕೂಗುವುದಿಲ್ಲ ಎಂದು ಶಿರೋಮಣಿ ಅಕಾಲಿ ದಳ್ ಮುಖ್ಯಸ್ಥ ಸಿಮ್ರಂಜಿತ್ ಸಿಂಗ್ ಮನ್ ಹೇಳಿರುವುದಾಗಿ ಬಲ್ಲಮೂಲಗಳು ವರದಿ ಮಾಡಿವೆ.
ಭಾರತ್ ಮಾತಾ ಕೀ ಜೈ ಎಂದು ಕೂಗದಿರುವುದಕ್ಕೆ ಮಹರಾಷ್ಟ್ರ ವಿಧಾನಸಭೆಯಿಂದ ಒಬ್ಬ ಶಾಸಕರನ್ನು ಹೊರಗಟ್ಟಿದ ವಿಷಯವನ್ನುಲ್ಲೇಖಿಸಿದ ಮನ್ ಈ ರೀತಿ ಹೇಳಿದ್ದಾರೆ. 
ಅದೇ ವೇಳೆ  ಅಮೃತ್‌ಸರದ ಶಿರೋಮಣಿ ಅಕಾಲಿ ದಳ್ ಅಧ್ಯಕ್ಷರಾಗಿರುವ ಮನ್, ಸಿಖ್ಖರು ವಂದೇ ಮಾತರಂ ಎಂದೂ ಹೇಳಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಸುದ್ದಿ ಪತ್ರಿಕೆಯೊಂದು ವರದಿ ಪ್ರಕಟಿಸಿದೆ.
ಅಷ್ಟೇ ಅಲ್ಲದೆ ಬಿಜೆಪಿ ವಿರುದ್ಧ ಕಿಡಿ ಕಾರಿದ ಮನ್, ಬಿಜೆಪಿ ಆಡಳಿತರೂಢವಾಗಿರುವ ಹರಿಯಾಣದಲ್ಲಿ ಪವಿತ್ರ ಭಗವದ್ಗೀತೆಯಂಥಾ ಧರ್ಮಗ್ರಂಥಗಳನ್ನು ಅನುಸರಿಸುವಂತೆ ಒತ್ತಾಯಿಸುವ ತೀರ್ಮಾನವನ್ನು ಸರ್ಕಾರ ಕೈ ಬಿಡಬೇಕೆಂದು ಹೇಳಿದ್ದಾರೆ. 
ಅಂದ ಹಾಗೆ ಶಿರೋಮಣಿ ಅಕಾಲಿ ದಳ್ ಪಂಜಾಬ್ ಮತ್ತು ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಜತೆ ಮೈತ್ರಿಯನ್ನು ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com