ಚಂಡೀಗಢ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಹುಸಿ ಬಾಂಬ್ ಕರೆ

ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ನಲ್ಲಿ ಮಂಗಳವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಬೆನ್ನಲ್ಲೇ ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ...
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಹುಸಿ ಬಾಂಬ್ ಕರೆ (ಸಂಗ್ರಹ ಚಿತ್ರ)
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿಸಿದ ಹುಸಿ ಬಾಂಬ್ ಕರೆ (ಸಂಗ್ರಹ ಚಿತ್ರ)

ಚಂಡೀಗಢ: ಬೆಲ್ಜಿಯಂ ರಾಜಧಾನಿ ಬ್ರುಸೆಲ್ಸ್ ನಲ್ಲಿ ಮಂಗಳವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಬೆನ್ನಲ್ಲೇ ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆಯೊಂದು ಬಂದಿದ್ದು, ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನಿನ್ನೆಯಷ್ಟೇ ಬ್ರುಸೆಲ್ಸ್ ವಿಮಾನ ನಿಲ್ದಾಣ ಹಾಗೂ ಮೆಟ್ರೋ ಸ್ಟೇಷನ್ ನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದರಂತೆ ಚಂಡೀಗಢದ ಜೆಟ್ ಏರ್ವೇಸ್ ಕಾಲ್ ಸೆಂಟರ್ ಗೆ ಮಾಡಿರುವ ವ್ಯಕ್ತಿಯೋರ್ವ ನವದೆಹಲಿಗೆ ಹೋಗುವ 5 ವಿಮಾನಗಳಲ್ಲಿ ಬಾಂಬ್ ಗಳನ್ನು ಇರಿಸಿರುವುದಾಗಿ ಹೇಳಿದ್ದಾನೆ. ಹೀಗಾಗಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆತಂದ ವಿಮಾನ ನಿಲ್ದಾಣದ ಅಧಿಕಾರಿಗಳು ನಿಲ್ದಾಣದಾದ್ಯಂತ ತಪಾಸಣೆ ನಡೆಸಿದ್ದಾರೆ. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕರೆ ಬಂದಾಗ ನಿಲ್ದಾಣದಿಂದ ಮೂರು ವಿಮಾನಗಳು ಹೊರಡಲು ತಯಾರಾಗಿದ್ದವು. ನಂತರ ಪ್ರತ್ಯೇಕವಾಗಿ ಎಲ್ಲಾ ವಿಮಾನಗಳನ್ನು ಅಧಿಕಾರಿಗಳು ತಪಾಸಣೆಗೊಳಪಡಿಸಿದ್ದಾರೆ. ಎಲ್ಲಾ ತಪಾಸಣೆ ನಂತರ ರಾತ್ರಿ 8 ಗಂಟೆಗೆ ವಿಮಾನಗಳು ಹೊರಡಲು ಆರಂಭಿಸಿದೆ. ತಪಾಸಣೆ ನಂತರ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ತಿಳಿದುಬಂದಿದೆ.

ತಪಾಸಣಾ ಕಾರ್ಯಾಚರಣೆ ಎರಡೂವರೆ ಗಂಟೆಗಳ ಕಾಲ ನಡೆದಿತ್ತು. ಅನಾನುಕೂಲತೆಗೆ ವಿಷಾದಿಸುತ್ತೇವೆ. ಅತಿಥಿಗಳ ಹಾಗೂ ಸಿಬ್ಬಂದಿಗಳ ಭದ್ರತೆ, ಸುರಕ್ಷತೆ ನಮಗೆ ಮುಖ್ಯವಾಗಿದೆ ಎಂದು ಜೆಟ್ ಏರ್ವೇಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com