ಹೋಳಿ: ದೆಹಲಿಯಲ್ಲಿ ಕುಡಿದು ವಾಹನ ಚಾಲನೆ ಮಾಡಿದ 558 ಪ್ರಕರಣ ದಾಖಲು
ದೇಶ
ಹೋಳಿ: ದೆಹಲಿಯಲ್ಲಿ ಕುಡಿದು ವಾಹನ ಚಾಲನೆ ಮಾಡಿದ 558 ಪ್ರಕರಣ ದಾಖಲು
ಹೋಳಿ ಹಬ್ಬದ ದಿನದಂದು ದೆಹಲಿಯಲ್ಲಿ ಕುಡಿದು ಚಾಲನೆ ಮಾಡಿದ 558 ಪ್ರಕರಣಗಳು ದಾಖಲಾಗಿವೆ.
ದೆಹಲಿ: ಹೋಳಿ ಹಬ್ಬದ ದಿನದಂದು ದೆಹಲಿಯಲ್ಲಿ ಕುಡಿದು ಚಾಲನೆ ಮಾಡಿದ 558 ಪ್ರಕರಣಗಳು ದಾಖಲಾಗಿವೆ. ಮಾ.23 ರ ತಡರಾತ್ರಿ ವರೆಗೂ 558 ಪ್ರಕರಣಗಳನ್ನು ದಾಖಲಿಸಿದ್ದೇವೆ, ಈ ಪೈಕಿ ದಕ್ಷಿಣ ದೆಹಲಿಯಲ್ಲಿ ಅತಿ ಹೆಚ್ಚು(264 ) ಪ್ರಕರಣಗಳು ದಾಖಲಾಗಿವೆ ಎಂದು ದೆಹಲಿಯ ವಿಶೇಷ ಪೊಲೀಸ್ ಆಯುಕ್ತ ಮುಖೇಶ್ ಚಂದ್ರ ಹೇಳಿದ್ದಾರೆ.
ಹೋಳಿ ದಿನದಂದು ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಅವಘಡಗಳನ್ನು ತಪ್ಪಿಸಲು ದೆಹಲಿಯಲ್ಲಿ ಪೊಲೀಸರ 400 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮುಖೇಶ್ ಚಂದ್ರ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ