ಬ್ರುಸೆಲ್ಸ್ ಉಗ್ರ ದಾಳಿ: ನಾಪತ್ತೆಯಾದ ಭಾರತೀಯ ವ್ಯಕ್ತಿ ಕೊನೆ ಬಾರಿ ಕರೆ ಮಾಡಿದ್ದು ಮೆಟ್ರೋದಿಂದ

ಬೆಲ್ಜಿಯಂನ ಬ್ರುಸೆಲ್ಸ್ ನಗರದಲ್ಲಿನ ಉಗ್ರದಾಳಿಯ ವೇಳೆ ನಾಪತ್ತೆಯಾಗಿದ್ದ ಭಾರತೀಯನ ಫೋನ್ ಕರೆಗಳನ್ನು ಟ್ರ್ಯಾಕ್ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ...
ಸುಷ್ಮಾ ಸ್ವರಾಜ್ - ರಾಘವೇಂದ್ರನ್ ಗಣೇಶ್
ಸುಷ್ಮಾ ಸ್ವರಾಜ್ - ರಾಘವೇಂದ್ರನ್ ಗಣೇಶ್
ನವದೆಹಲಿ: ಬೆಲ್ಜಿಯಂನ ಬ್ರುಸೆಲ್ಸ್ ನಗರದಲ್ಲಿನ ಉಗ್ರದಾಳಿಯ ವೇಳೆ ನಾಪತ್ತೆಯಾಗಿದ್ದ ಭಾರತೀಯನ ಫೋನ್ ಕರೆಗಳನ್ನು ಟ್ರ್ಯಾಕ್ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಬ್ರುಸೆಲ್ಸ್‌ನ ಒಂದು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ನಾಪತ್ತೆಯಾಗಿದ್ದ ರಾಘವೇಂದ್ರನ್ ಗಣೇಶ್ ಕೊನೆಯ ಬಾರಿ ಫೋನ್ ಮಾಡಿದ್ದರು ಎಂದು ಸುಷ್ಮಾ  ಸ್ವರಾಜ್ ಟ್ವೀಟ್  ಮಾಡಿದ್ದಾರೆ.
ಇನ್‌ಫೋಸಿಸ್ ಉದ್ಯೋಗಿಯಾಗಿರುವ ಬೆಂಗಳೂರು ಮೂಲದ ರಾಘವೇಂದ್ರನ್, ಕಳೆದ ನಾಲ್ಕು ವರ್ಷದಿಂದ ಇವರು ಬ್ರುಸೆಲ್ಸ್ ನಲ್ಲಿದ್ದಾರೆ. ಇವರನ್ನು ಪತ್ತೆ ಮಾಡಲು ಭಾರತೀಯ ರಾಯಭಾರಿ ಕಚೇರಿ ಕಠಿಣ ಪ್ರಯತ್ನ ಮಾಡುತ್ತಿದೆ.
ಅದೇ ವೇಳೆ  ಜೆಟ್ ಏರ್‌ವೇಸ್‌ನ ಸಿಬ್ಬಂದಿಗಳಾದ ನಿಧಿ ಚಫೇಕರ್ ಮತ್ತು ಅಮಿತ್ ಮೋಟ್ವಾನಿ ಈ ದಾಳಿಯಲ್ಲಿ ಗಾಯಗೊಂಡಿದ್ದು, ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸುಷ್ಮಾ ಹೇಳಿದ್ದಾರೆ. 
ನಾನು ಈಗಷ್ಟೇ ಬ್ರುಸೆಲ್ಸ್ ನಲ್ಲಿರುವ ಭಾರತೀಯ ರಾಯಭಾರಿ ಮಂಜೀವ್ ಪುರಿ ಅವರಲ್ಲಿ ಮಾತನಾಡಿದ್ದು ಮುಂಬೈ ಮೂಲದ ನಿಧಿ ಮತ್ತು ಅಮಿತ್ ಆರೋಗ್ಯ ಸುಧಾರಣೆಯಾಗಿದೆ ಎಂದು ಅವರು ಹೇಳಿದ್ದಾರೆ. 
ಬೆಲ್ಜಿಯಂನ ರಾಜಧಾನಿಯ ವಿಮಾನ ನಿಲ್ದಾಣದಲ್ಲೂ ಮೆಟ್ರೋ ಸ್ಟೇಷನ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ  35 ಮಂದಿ ಸಾವಿಗೀಡಾಗಿದ್ದು, ನೂರಕ್ಕಂತಲೂ ಹೆಚ್ಚು ಮಂದಿಗೆ ಗಾಯಗಳಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com