ಹಿಟ್ ಲಿಸ್ಟ್'ನಲ್ಲಿ ಬಾಳ ಠಾಕ್ರೆ ಇರುವುದು ಹೆಮ್ಮೆ ಎಂದ ಶಿವಸೇನೆ

ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಹಿಟ್ ಲಿಸ್ಟ್ ನಲ್ಲಿ ಬಾಳ ಠಾಕ್ರೆ ಅವರು ಇರುವುದು ನಮಗೆ ಹೆಮ್ಮೆಯ ವಿಚಾರ ಎಂದು ಶಿವಸೇನೆ ಗುರುವಾರ ಹೇಳಿಕೊಂಡಿದೆ...
ಶಿವಸೇನೆ ನಾಯಕ ಸಂಜಯ್ ರಾವತ್
ಶಿವಸೇನೆ ನಾಯಕ ಸಂಜಯ್ ರಾವತ್

ಮುಂಬೈ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಹಿಟ್ ಲಿಸ್ಟ್ ನಲ್ಲಿ ಬಾಳ ಠಾಕ್ರೆ ಅವರು ಇರುವುದು ನಮಗೆ ಹೆಮ್ಮೆಯ ವಿಚಾರ ಎಂದು ಶಿವಸೇನೆ ಗುರುವಾರ ಹೇಳಿಕೊಂಡಿದೆ.

ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಉಗ್ರ ಹೆಡ್ಲಿ ಇತ್ತೀಚೆಗಷ್ಟೇ ಎಲ್'ಇಟಿ ಉಗ್ರ ಸಂಘಟನೆ ಹಿಟ್ ಲಿಸ್ಟ್ ನಲ್ಲಿ ಬಾಳ ಠಾಕ್ರೆಯವರು ಇದ್ದರು ಎಂದು ಹೇಳಿದ್ದಾನೆ. ಬಾಳ ಠಾಕ್ರೆ ಅವರು ಹಿಟ್ ಲಿಸ್ಟ್ ನಲ್ಲಿರುವುದು ಆಶ್ಚರ್ಯ ಪಡುವ ವಿಚಾರವೇನಲ್ಲ. ಹಿಟ್ ಲಿಸ್ಟ್ ನಲ್ಲಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.

ಬಾಳ ಠಾಕ್ರೆಯವರು ಹಿಟ್ ಲಿಸ್ಟ್ ನಲ್ಲಿದ್ದರು ಎಂಬುದು ಆಶ್ಚರ್ಯ ಪಡುವ ವಿಚಾರವೇನಲ್ಲ. ಬಾಳ ಠಾಕ್ರೆಯವರು ಸತ್ಯವಾದ ರಾಷ್ಟ್ರೀಯವಾದಿಗಳಾಗಿದ್ದರು. ಪಾಕಿಸ್ತಾನ ಉಗ್ರರ ಕುಖ್ಯಾತ ಚಟುವಟಿಕೆಗಳನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದರು. ಇಂತಹ ವ್ಯಕ್ತಿಯನ್ನು ಉಗ್ರ ಸಂಘಟನೆ ಹತ್ಯೆ ಮಾಡಲು ಯೋಜನೆ ರೂಪಿಸಿತ್ತು ಎಂಬುದು ಸಾಮಾನ್ಯ ವಿಚಾರವಾಗಿದ್ದು, ಇದರಲ್ಲಿ ಆಶ್ಚರ್ಯ ಪಡುವುದೇನು ಇರಲಿಲ್ಲ.

ಎಲ್ ಇಟಿ ಉಗ್ರ ಸಂಘಟನೆ ಬಾಳ ಠಾಕ್ರೆಯವರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿತ್ತು. ಆದರೆ, ಅದರಲ್ಲಿ ಯಶಸ್ವಿಯಾಗಿರಲಿಲ್ಲ ಎಂದು ಹೆಡ್ಲಿ ಹೇಳಿದ್ದಾನೆ. ಅಲ್ಲದೆ, ಈ ಮಿಷನ್ ನಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಂದ ಬಂಧನಕ್ಕೊಳಗಾಗಿ ಮತ್ತೆ ತಪ್ಪಿಸಿಕೊಂಡಿದ್ದ ಎಂದು ಹೇಳಿದ್ದಾನೆ, ಆದರೆ, ನಾನು ಕೇಳುವುದೇನೆಂದರೆ ಈ ಸತ್ಯವನ್ನೇಕೆ ಪೊಲೀಸರು ಮುಚ್ಚಿಟ್ಟಿದ್ದರು. ಬಂಧನಕ್ಕೊಳಗಾದ, ತಪ್ಪಿಸಿಕೊಂಡ ಆ ವ್ಯಕ್ತಿ ಯಾರು? ಇದರ ಹಿಂದಿನ ಮರ್ಮವೇನು ಎಂದು ಮುಂಬೈ ಪೊಲೀಸರು ಹಾಗೂ ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಶೀಘ್ರದಲ್ಲೇ ಪೊಲೀಸ್ ಆಯುಕ್ತರು ಉತ್ತರಿಸಬೇಕೆಂದು ಆಗ್ರಹಿಸಿದ್ದಾರೆ.

ಪಾಕಿಸ್ತಾನ-ಅಮೆರಿಕಾದ ಉಗ್ರ ಡೇವಿಡ್ ಹೆಡ್ಲಿಯ ಪಾಟಿ ಸವಾಲು ಪ್ರಕ್ರಿಯೆ ಇಂದೂ ಸಹ ಮುಂದುವರೆದಿದ್ದು, ವಿಚಾರಣೆ ವೇಳೆ ಹೆಡ್ಲಿ ಕೆಲವು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಶಿವಸೇನೆ ಮುಖ್ಯಸ್ಥನನ್ನು ಹತ್ಯೆ ಮಾಡಲು ಸಂಚು ರೂಪಿಸಿತ್ತು ಎಂದು ಹೇಳಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com