ಕ್ಷುಲ್ಲಕ ಕಾರಣಕ್ಕೆ ದೆಹಲಿಯಲ್ಲಿ ದಂತವೈದ್ಯನ ಕೊಲೆ

ಕ್ಷುಲ್ಲಕ ಕಾರಣಕ್ಕೆ 15 ಜನರ ಗುಂಪೊಂದು 40 ವರ್ಷದ ದಂತ ವೈದ್ಯನನ್ನು ಬಡಿದು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಕ್ಷುಲ್ಲಕ ಕಾರಣಕ್ಕೆ 15 ಜನರ ಗುಂಪೊಂದು 40 ವರ್ಷದ ದಂತ ವೈದ್ಯನನ್ನು ಬಡಿದು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ವಿಕಾಸ್‌ಪುರಿ ಪ್ರದೇಶದ ನಿವಾಸಿಯಾಗಿದ್ದ ದಂತವೈದ್ಯ ಡಾ. ಪಂಕಜ್ ನಾರಂಗ್ ಮೃತ ವೈದ್ಯ, ಇವರು ತಮ್ಮ ಪತ್ನಿ ಹಾಗೂ ಪುತ್ರ ನ ಜೊತೆ ವಾಸವಿದ್ದರು.

ಡಾ. ನಾರಂಗ್ ತಮ್ಮ ಮನೆಯ ಹೊರಗಡೆ ವಾಕಿಂಗ್ ಮಾಡುತ್ತಿರುವಾಗ, ಆರೋಪಿ ನಾಸೀರ್ ತನ್ನ ಬೈಕ್‌ನಿಂದ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದಾನೆ. ನಾರಂಗ್ ಮತ್ತು ನಾಸೀರ್ ನಡುವೆ ವಾಗ್ವಾದ ಆರಂಭವಾಗಿದೆ. ನಾಸೀರ್ ಅಲ್ಲಿಂದ ತೆರಳಿದ ನಂತರ ಸುಮಾರು 12 ಜನರನ್ನು ಕರೆದುಕೊಂಡು ಬಂದ ವೈದ್ಯ ನಾರಂಗ್ ಮೇಲೆ ಬಡಿಗೆ ಮತ್ತು ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾನೆ. ಜಗಳವನ್ನು ಬಿಡಿಸಲು ಬಂದವರು ಮೇಲೂ ಹಲ್ಲೆ ಮಾಡಿದ್ದಾರೆ.

ಮಧ್ಯ ರಾತ್ರಿ 12 ಗಂಟೆಗೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ, ಪೊಲೀಸರು ಬರುವ ವೇಳೆಗೆ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳಲ್ಲಿ ನಾಲ್ವರು ಅಪ್ರಾಪ್ತ ಬಾಲಕರು ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ವೈದ್ಯ ನಾರಂಗ್‌ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com