ನವದೆಹಲಿ: ಕಳೆದ ಜನವರಿಯಲ್ಲಿ ನಡೆದ ಪಠಾಣ್ ಕೋಟ್ ದಾಳಿ ಪ್ರಕರಣದ ತನಿಖೆಗಾಗಿ ಪಾಕಿಸ್ತಾನದ ಭದ್ರತಾ ಅಧಿಕಾರಿಗಳ ತಂಡ ಸೋಮವಾರ ದೆಹಲಿಗೆ ಆಗಮಿಸಿಲಿದೆ.
ಐವರು ಸದಸ್ಯರ ಪಾಕ್ ತನಿಖಾ ತಂಡ ಸೋಮವಾರ ಬೆಳಗ್ಗೆ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್ಐಎ)ಯ ಪ್ರಧಾನ ಕಚೇರಿಗೆ ಭೇಟಿ ನೀಡಿಲಿದ್ದು, ಮಂಗಳವಾರ ಪಠಾಣ್ ಕೋಟ್ ಗೆ ತೆರಳಲಿದೆ ಎಂದು ಎಎನ್ಐ ವರದಿ ಮಾಡಿದೆ.
ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸಲು ಭಾರತಕ್ಕೆ ಆಗಮಿಸುತ್ತಿರುವ ಪಾಕ್ ತನಿಖಾ ತಂಡಕ್ಕೆ ಭಾರತ ಸರ್ಕಾರ ಇತ್ತೀಚಿಗಷ್ಟೆ ವೀಸಾ ನೀಡಿತ್ತು.
ಜ.2 ರಂದು ಪಂಜಾಬ್ ನ ಪಠಾಣ್ ಕೋಟ್ ವಾಯು ನೆಲೆಯಲ್ಲಿ ದಾಳಿ ನಡೆಸಿದ್ದ ಭಯೋತ್ಪಾದಕರಿಗೂ ಪಾಕಿಸ್ತಾನದ ಜೈಶ್-ಇ- ಮೊಹಮ್ಮದ್ ಉಗ್ರ ಸಂಘಟನೆಗೂ ನಂಟಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ರಚನೆ ಮಾಡಿರುವ ಜಂಟಿ ತನಿಖಾ ತಂಡ ಭಾರತಕ್ಕೆ ಆಗಮಿಸಿ ತನಿಖೆ ನಡೆಸಲಿದೆ.