ಶನಿ ಶಿಂಗ್ಣಾಪುರ ದೇಗುಲ ವಿವಾದ: ಮಹಿಳೆಯರ ಪ್ರವೇಶ ನಿಷೇಧ ತೆರವು ಮಾಡಿದ ಬಾಂಬೆ ಹೈಕೋರ್ಟ್

ಮಹಾರಾಷ್ಟ್ರ ಶನಿ ಶಿಂಗ್ಣಾಪುರ ದೇಗುಲ ಮಹಿಳೆಯರ ಪ್ರವೇಶ ಸಂಬಂಧಿಸಿ ಎದ್ದಿದ್ದ ವಿವಾದಕ್ಕೆ ಸಂಬಂಧಿಸಿ ಬಾಂಬೆ ಹೈ ಕೋರ್ಟ್ ಮಹತ್ತರ ತೀರ್ಪನ್ನು ಹೊರಹಾಕಿದ್ದು...
ಶನಿ ಶಿಂಗ್ಣಾಪುರ ದೇಗುಲ
ಶನಿ ಶಿಂಗ್ಣಾಪುರ ದೇಗುಲ

ಮುಂಬೈ: ಮಹಾರಾಷ್ಟ್ರ ಶನಿ ಶಿಂಗ್ಣಾಪುರ ದೇಗುಲ ಮಹಿಳೆಯರ ಪ್ರವೇಶ ಸಂಬಂಧಿಸಿ ಎದ್ದಿದ್ದ ವಿವಾದಕ್ಕೆ ಸಂಬಂಧಿಸಿ ಬಾಂಬೆ ಹೈ ಕೋರ್ಟ್ ಮಹತ್ತರ ತೀರ್ಪನ್ನು ಹೊರಹಾಕಿದ್ದು, ದೇಗುಲದಲ್ಲಿನ ಮಹಿಳೆಯರ ಪ್ರವೇಶ ನಿಷೇಧವನ್ನು ಬುಧವಾರ ತೆರವುಗೊಳಿಸಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ವಿಚಾರಣೆ ನಡೆಸಿರುವ ಪೀಠವು, ಶನಿ ಶಿಂಗ್ಣಾಪುರ ದೇಗುಲದಲ್ಲಿ ಮಹಿಳೆಯರಿಗೆ ನಿಷೇಧ ಹೇರುವಂತಿಲ್ಲ. ಪುರುಷರು ಹೋಗುವ ಸ್ಥಳಗಳಿಗೆ ಮಹಿಳೆಯರು ಕೂಡ ಹೋಗಬಹುದು ಎಂದು ಹೇಳಿದೆ.

ಶನಿ ಶಿಂಗ್ಣಾಪುರ ದೇಗುಲದಲ್ಲಿ ಮಹಿಳೆಯರ ಪ್ರವೇಶ ನಿಷೇಧ ವಿವಾದಕ್ಕೆ ಸಂಬಂಧಿಸಿ ಬಾಂಬೆ ಹೈ ಕೋರ್ಟ್ ನಲ್ಲಿ ಕೆಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿದ್ದವು. ಅರ್ಜಿಯಲ್ಲಿ ದೇಗುಲದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಇದೊಂದು ನಾಗರಿಕ ಮೂಲಭೂತ ಹಕ್ಕುಗಳಿಗೆ ವಿರುದ್ಧವಾದದ್ದು ಎಂದು ಹೇಳಲಾಗಿತ್ತು.

ಇದೀಗ ಈ ಅರ್ಜಿಗಳನ್ನು ಪರಿಶೀಲಿಸಿರುವ ಬಾಂಬೆ ಹೈ ಕೋರ್ಟ್ ದೇಗುಲದಲ್ಲಿ ಮಹಿಳೆಯರಿಗಿರುವ ಪ್ರವೇಶ ನಿಷೇಧವನ್ನು ತೆರವುಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com