
ನವದೆಹಲಿ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಮಾವೋವಾದಿ ಉಗ್ರರು ನಡೆಸಿರುವ ಭೀಕರ ಸ್ಫೋಟದಲ್ಲಿ ಸಾವನ್ನಪ್ಪಿದ್ದ 7 ಯೋಧರ ಪೈಕಿ ಮೂವರು ಯೋಧರು ಗುಂಡೇಟು ಬಿದ್ದು ಸಾವನ್ನಪ್ಪಿದ್ದರು ಎಂದು ಸಿಆರ್ ಪಿಎಫ್ ಡೈರೆಕ್ಟರ್ ಜನರಲ್ ಕೆ. ದುರ್ಗಾ ಪ್ರಸಾದ್ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅವರು, ನಕ್ಸಲರು ಸ್ಫೋಟಿಸುವುದಕ್ಕೂ ಮುನ್ನ ಮೂವರು ಯೋಧರ ತಲೆಗೆ ಹಾಗೂ ಭುಜಕ್ಕೆ ಗುಂಡು ಹಾರಿಸಿದ್ದರು. ಯೋಧರು ಬದುಕುಳಿದಿದ್ದಾರೋ ಅಥವಾ ಸಾವನ್ನಪ್ಪಿದ್ದಾರೋ ಎಂಬುದರ ಬಗ್ಗೆ ಅನುಮಾನಗಳಿವೆ. ಆದರೆ, ನಕ್ಸಲರು ಐಇಡಿ ಸ್ಫೋಟಿಸಿದ ಬಳಿಕ 4 ಯೋಧರು ಸಾವನ್ನಪ್ಪಿದ್ದರು. ಸ್ಫೋಟಿಸಿದ ಬಳಿಗ ನಕ್ಸಲರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಯೋಧರು ಬದುಕಿದ್ದಾರೋ ಅಥವಾ ಸಾವನ್ನಪ್ಪಿದ್ದಾರೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಪರಿಶೀಲನೆ ನಡೆಸಿದ್ದರು ಎಂದು ಹೇಳಿದ್ದಾರೆ.
ಸಿಆರ್‌ಪಿಎಫ್'ನ 230ನೇ ಬೆಟಾಲಿಯನ್‌ನ ಜವಾನರು ಸಾಗುತ್ತಿದ್ದ ವಾಹನವನ್ನು ಗುರಿಯಾಗಿರಿಸಿಕೊಂಡಿದ್ದ ಮಾವೋವಾದಿ ಉಗ್ರರು ಮಾರ್ಚ್ 30ರಂದು ಮೋಖಪಾಲ್ ಎಂಬ ಹಳ್ಳಿಗೆ ಸಮೀಪದಲ್ಲಿ ನೆಲ ಬಾಂಬ್ ಸ್ಫೋಟಿಸಿದ್ದರು. ಪರಿಣಾಮ ಏಳು ಮಂದಿ ಜವಾನರು ಹತರಾಗಿದ್ದಾರೆಂದು ಎಂದು ಹೇಳಲಾಗುತ್ತಿತ್ತು.
Advertisement