ವೇಶ್ಯಾಗೃಹ
ದೇಶ
ಮುಂಬೈ ವೇಶ್ಯಾಗೃಹಗಳಿಗೆ ಬಾಂಗ್ಲಾ ಮಹಿಳೆಯರು; ಹೆಚ್ಚುತ್ತಿದೆ ಅನೈತಿಕ ಸಾಗಾಣಿಕೆ
ಬಾಂಗ್ಲಾದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅನೈತಿಕ ಸಾಗಾಣಿಕೆ ನಡೆಯುತ್ತಿದ್ದು, ಅಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಮುಂಬೈನ ವೇಶ್ಯಾಗೃಹಗಳಿಗೆ ...
ಮುಂಬೈ: ಬಾಂಗ್ಲಾದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅನೈತಿಕ ಸಾಗಾಣಿಕೆ ನಡೆಯುತ್ತಿದ್ದು, ಅಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಮುಂಬೈನ ವೇಶ್ಯಾಗೃಹಗಳಿಗೆ ಕರೆದೊಯ್ಯಲಾಗುತ್ತಿದೆ ಎಂದು ಪ್ರೇರಣಾ ಸಂಸ್ಥೆ ಹೇಳಿದೆ.
ಮುಂಬೈನಲ್ಲಿರುವ ಪ್ರಧಾನ ರೆಡ್‌ಲೈಟ್ ಪ್ರದೇಶವಾದ ಕಾಮಾಟಿಪುರದಲ್ಲಿ ಲೈಂಗಿಕ ಕಾರ್ಯಕರ್ತರ ಸಂಖ್ಯೆ ವರ್ಧನೆಯಾಗಿದೆ ಎಂದು ಪ್ರೇರಣಾ ಎನ್‌ಜಿಒ ಹೇಳಿದೆ.
ಪಶ್ಚಿಮ ಬಂಗಾಳದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಇಲ್ಲಿಗೆ ಕರೆತರಲಾಗುತ್ತಿದೆ. ಅಷ್ಟೇ ಅಲ್ಲದೆ ಬಾಂಗ್ಲಾದೇಶದಿಂದ ವಲಸೆ ಬಂದ ಮಹಿಳೆಯರನ್ನು ಕೂಡಾ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕರೆ ತರಲಾಗುತ್ತಿದೆ ಎಂದು ರಾಯಿಟರ್ಸ್ ಸಂಸ್ಥೆಯೊಂದಿಗೆ ಮಾತನಾಡಿದ ಪ್ರೇರಣಾ ಸಹ ಸಂಸ್ಥಾಪಕಿ ಪ್ರೀತಿ ಪಾಟ್ಕರ್ ಹೇಳಿದ್ದಾರೆ.
2010- 15 ರ ಕಾಲಾವಧಿಯಲ್ಲಿ ಕಾಮಾಟಿಪುರದಲ್ಲಿರುವ ಪ್ರೇರಣಾ ನೈಟ್ ಕೇರ್ ಸೆಂಟರ್‌ನಲ್ಲಿ ಲೈಂಗಿಕ ಕಾರ್ಯಕರ್ತರ 213 ಮಕ್ಕಳನ್ನು ಸೇರ್ಪಡೆ ಮಾಡಲಾಗಿದೆ.
ಇದರಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ, ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಹಲವಾರು ಮಕ್ಕಳಿದ್ದಾರೆ.
ಆಧಿಕೃತ ಮೂಲಗಳ ಪ್ರಕಾರ ಭಾರತದಲ್ಲಿ ಬಾಂಗ್ಲಾದೇಶದ ಮೂರು ಮಿಲಿಯನ್ ಜನರಿದ್ದಾರೆ. ಪ್ರತೀ ದಿನ ನೂರಾರು ಜನರು ಅಧಿಕೃತ ದಾಖಲೆ ಪತ್ರಗಳಿಲ್ಲದೆಯೇ ಭಾರತಕ್ಕೆ ನುಸುಳುತ್ತಿದ್ದಾರೆ. ಹೀಗೆ ಬರುವ ಜನರು ಭಾರತದಲ್ಲಿ ಕೆಲಸ ಪಡೆಯಲು ಯತ್ನಿಸುತ್ತಿದ್ದರೆ, ಕೆಲವು ಏಜೆಂಟರುಗಳು ಇವರಿಗೆ ಸುಳ್ಳು ಭರವಸೆಗಳನ್ನು ನೀಡಿ ಹಾದಿ ತಪ್ಪಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದಾರೆ ಎಂದು ಪಾಟ್ಕರ್ ಹೇಳಿದ್ದಾರೆ.

